ಬಿಜಾಪುರದ ಆದಿಲ್ ಶಾಹಿಗಳು

ಬಿಜಾಪುರದ ಆದಿಲ್ ಶಾಹಿಗಳು (೧೪೮೯ – ೧೬೮೬): ಆದಿಲ್ ಶಾಹಿ ಸಾಮ್ರಾಜ್ಯದ ಸ್ಥಾಪಕ, ಯೂಸುಫ್ ಆದಿಲ್ ಶಾಹಿ, ಪ್ರಾಯಶಃ ಬಹಮನಿ ಮೂಲದವರು. ಯೂಸುಫ್ ಒಬ್ಬ ಸಾಂಸ್ಕೃತಿಕ ವ್ಯಕ್ತಿ. ಅವರು ಕವಿಗಳನ್ನು ಮತ್ತು ಕುಶಲಕರ್ಮಿಗಳನ್ನು ಪರ್ಷಿಯಾ, ಟರ್ಕಿ, ಮತ್ತು ರೋಮ್ ನಿಂದ ಆಹ್ವಾನಿಸಿದ್ದರು. ಇಬ್ರಾಹಿಂ-೨ ತನ್ನ ಶೌರ್ಯ, ಗುಪ್ತಚರ ಮತ್ತು ಹಿಂದೂ ಸಂಗೀತ ಮತ್ತು ತತ್ವಶಾಸ್ತ್ರದ ಕಡೆಗಿನ ಒಲವಿಗೆ ಹೆಸರುವಾಸಿಯಾಗಿದ್ದ. ಇವರ ಆಶ್ರಯದಲ್ಲಿ ಬಿಜಾಪುರ ಚಿತ್ರಕಲೆ ಶಾಲೆಯು ಉತ್ತುಂಗ ತಲುಪಿತು. ಮುಹಮ್ಮದ್ ಆದಿಲ್ ಷಾ ಅವರು ತಂದೆ ಇಬ್ರಾಹಿಂ-೨ ನಂತರ ಆಳ್ವಿಕೆಗೆ ಬಂದರು. ಅವರು ಬಿಜಾಪುರದ ಭವ್ಯ ರಚನೆ, ಗೋಲ್ ಗುಂಬಜ್ , ವಿಶ್ವದ ಅತಿದೊಡ್ಡ ಗುಮ್ಮಟ( ಇದರಲ್ಲಿ ಪ್ರತಿಯೊಂದು ಸಣ್ಣ ಪಿಸುಮಾತು ೭ ಸರಿ ಪ್ರತಿದ್ವನಿಸುತ್ತದೆ) ಕಟ್ಟಿಸಿ ಪ್ರಸಿದ್ಧರಾಗಿದ್ದಾರೆ.
ಬಿಜಾಪುರದ ಸೂಫಿ ಗಳನ್ನು ೩ ಗುಂಪುಗಳಲ್ಲಿ ವಿಂಗಡಿಸಬಹುದು. ಒಂದು ಬಹಮನಿ ಸಾಮ್ರಾಜ್ಯದವರು, ಎರಡು ಆದಿಲ್ ಶಾಹಿ ಸಮಯದವರು ಮತ್ತು ಮೂರು ಆದಿಲ್ ಶಾಹಿ ಸಾಮ್ರಾಜ್ಯದ ನಂತರದವರು. ಇನ್ನೊಂದು ವಿಂಗಡಣೆಯ ಪ್ರಕಾರ ಸಮಾಜ ಯೋಧರು, ಸುಧಾರಕರು, ವಿದ್ವಾಂಸರು, ಕವಿಗಳು ಮತ್ತು ಬರಹಗಾರ ಸೂಫಿ ಪಂಥಪಾಲಕರೆಂದೆನ್ನಬಹುದು.
ಬಿಜಾಪುರ ಭಾರತದ ಹೆಸರಾಂತ ನಗರಗಳಲ್ಲಿ ಒಂದು ಪ್ರಮುಖ ಸ್ಥಾನವನ್ನು ಗಳಿಸಿ ಸಂಸ್ಕೃತಿ, ವ್ಯಾಪಾರ ಮತ್ತು ವಾಣಿಜ್ಯ, ಶಿಕ್ಷಣ ಮತ್ತು ಕಲಿಕೆ ಇತ್ಯಾದಿಗಳಿಗೆ ಒಂದು ದೊಡ್ಡ ಕೇಂದ್ರವಾಗಿತ್ತು. ಇವರ ಸಂಸ್ಕೃತಿಯನ್ನು ಬಿಜಾಪುರ ಸಂಸ್ಕೃತಿ ಎನ್ನಲಾಗಿದ್ದು ಹಲವು ವಿಷಯಗಳಲ್ಲಿ ದಿಲ್ಲಿ ಮತ್ತು ಆಗ್ರ ವನ್ನು ಮೀರಿಸಿತ್ತು. ಇವರ ಜಾತ್ಯತೀತ ಪ್ರಕೃತಿ ಮತ್ತು ಉದಾರ ಪ್ರಾಯೋಜಕತ್ವ ದಿಂದಾಗಿ ವಿದ್ವಾಂಸರು, ಕವಿಗಳು, ಚಿತ್ರಕಾರರು, ನೃತ್ಯಗಾರರು, ಬರಹಗಾರರು, ಸಂಗೀತಗಾರರು, ಸೂಫಿ ಸಂತರು ಇತರ ಕಲೆಗಾರರು ಬಿಜಾಪುರಕ್ಕೆ ವಲಸೆ ಬಂದರು.
ಆದಿಲ್ ಶಾಹಿ ಸುಲ್ತಾನರು ಬಿಜಾಪುರದ ಜನರಿಗೆ ಮತ್ತು ಉಪನಗರಗಳಲ್ಲಿ ಶುದ್ಧ ಮತ್ತು ಆರೋಗ್ಯಕರ ನೀರಿನ ವಿಸ್ತಾರವಾದ ವ್ಯವಸ್ಥೆ ಮಾಡಿದರು. ತೋರ್ವಿಯಲ್ಲಿ ಒಂದು ಕಲ್ಲಿನ ಅಣೆಕಟ್ಟು ನಿರ್ಮಿಸಲಾಯಿತು. ತೋರ್ವಿ ಕಾಲುವೆ ಆದಿಲ್ ಶಾಹಿಗಳ ಅತ್ಯಂತ ವಿಶ್ವಾಸಾರ್ಹ ಎಂಜಿನಿಯರಿಂಗ್ ಸಾಧನೆಯಾಗಿದೆ ಎಂದು ನಂಬಲಾಗಿದೆ. ನಗರದಲ್ಲಿನ ಪ್ರಸ್ತುತ ನೀರು ಸರಬರಾಜನ್ನು ವೃದ್ಧಿಸಲುಮುಹಮ್ಮದ್ ಆದಿಲ್ ಶಾಹ ನವರು ಬಿಜಾಪುರದ ದಕ್ಷಿಣ ಭಾಗದಲ್ಲಿ ಬೇಗಂ ತಾಲಾಬ್ ನಿರ್ಮಿಸಿದರು. ೧೮೧೯ ರಲ್ಲಿ ಬಿಜಪುರಕ್ಕೆ ಭೇಟಿ ಕೊಟ್ಟ ಕ್ಯಾಪ್ಟನ್ ಸೈಕ್ಸ್ ನವರು ಬಿಜಾಪುರದಲ್ಲಿ ೭೦೦ ಮೆಟ್ಟಿಲಿರುವಂತ ಮತ್ತು ೩೦೦ ಮೆಟ್ಟಿಲಿಲ್ಲದ ಬಾವಿಗಳಿದ್ದ ಬಗ್ಗೆ ದಾಖಲಿಸಿದ್ದಾರೆ. ರಂಗರೆಜ್ ತಾಲಾಬ್, ಖಾಸಿಂ ತಾಲಾಬ್, ಫತೆಹಪುರ್ ತಾಲಾಬ್ ಮತ್ತು ಅಲ್ಲಾಹಪುರ್ ತಾಲಾಬಿನ ಅವಶೇಷಗಳನ್ನು ಬಿಜಾಪುರದ ಸುತ್ತಮುತ್ತಲು ಕಾಣಬಹುದಾಗಿದೆ.
ಮುಸಲ್ಮಾನರ ಆಳ್ವಿಕೆಯ ಮೊದಲು ಬಿಜಾಪುರವು ದಕ್ಷಿಣ ಭಾರತದ ಕಲಿಕೆಯ ಭವ್ಯ ಕೇಂದ್ರವಾಗಿತ್ತು. ದ್ವಿಭಾಷಾ ಮರಾಠಿ ಸಂಸ್ಕೃತ ಶಾಸನ ಕರೀಮುದ್ದೀನ್ ಮಸೀದಿಯ ಪರ್ಷಿಯನ್ ಕೆತ್ತನೆಯಿಂದ ತಿಳಿದುಬಂದ ವಿಚಾರವೆಂದರೆ ಬಿಜಾಪುರಕ್ಕೆ ದಕ್ಷಿಣ ಭಾರತದ ಬನರಾಸ್ ಎಂದು ಬಿರುದನ್ನು ನೀಡಲಾಗಿತ್ತೆಂದು ತಿಳಿದು ಬರುತ್ತದೆ. ಬಿಜಾಪುರದ ಖೈಜಿ ರಾಜ್ಯಪಾಲ ಮಲ್ಲಿಕ್ ಕರಿಮುದ್ದಿನ್ ರು ದಕ್ಷಿಣ ಭಾರತದ ಬನಾರಸ್ ಎಂದು ನಾಮಕರಣ ಮಾಡಿದರು. ಅಲ್ಲದೆ ವಿಶ್ವದಲ್ಲಿನ ಇಸ್ಲಾಮಿಕ್ ತಾರ್ಕಿಕ ಚಟುವಟಿಕೆಗಳಿಂದಾಗಿ ಇದನ್ನು ಎರಡನೆಯ ಬಾಗ್ದಾದೆಂದು ಕರೆಯಲಾಗಿತ್ತು. ಇಬ್ರಾಹಿಂ ಆದಿಲ್ ಶಾಹ್- ೨ ಇದರ ಪ್ರಖ್ಯಾತಿಯನ್ನು ಕಂಡು ವಿದ್ಯಾಪುರವೆಂದು ಕರೆದರು. ಅಲಿ ಆದಿಲ್ ಷಾ-೧ ಧರ್ಮ, ತರ್ಕ, ವಿಜ್ಞಾನ, ವಾಕ್ಯರಚನೆ, ವ್ಯುತ್ಪತ್ತಿ ಮತ್ತು ವ್ಯಾಕರಣ ಪಾರಂಗತರಾಗಿದ್ದರು. ಅವರಿಗೆ ಓದುವುದು ಎಷ್ಟು ಇಷ್ಟೆಂದರೆ ಪ್ರಯಾಣದಲ್ಲಿ ಕೂಡ ಪುಸ್ತಗಳನ್ನು ಕೊಂಡೊಯುತ್ತಿದ್ದರು. ಮಸೀದಿಗಳು ಮಕ್ತಬ್ಸ್ (ಪ್ರಾಥಮಿಕ ಶಾಲೆಗಳು)ನ್ನು ಹೊಂದಿದ್ದು ಅಲ್ಲಿ ಅರೇಬಿಕ್ ಮತ್ತು ಪರ್ಷಿಯನ್ ಅಧ್ಯಯನಗಳು ಕಲಿಸಲಾಗುತ್ತಿತ್ತು. ರಾಜ್ಯವು ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿತ್ತು. ರಾಜ್ಯದ ಪ್ರಾಯೋಜಕತ್ವ ಪರಿಣಾಮವಾಗಿ, ಅರೇಬಿಕ್, ಪರ್ಷಿಯನ್ ಮತ್ತು ದಖಾಣಿ ಉರ್ದು ಸಾಹಿತ್ಯಗಳು ಬೆಳೆದುಕೊಂಡವಲ್ಲದೆ ಜೊತೆಗೆ, ಸಂಸ್ಕೃತ, ಮರಾಠಿ ಮತ್ತು ಕನ್ನಡ ಭಾಷೆಗಳು ಏಳಿಗೆ ಕಂಡವು. ಪಂಡಿತ್ ನರಹರಿ , ಇಬ್ರಾಹಿಂ ಆದಿಲ್ ಷಾ-೨ ನ ನ್ಯಾಯಾಲಯದ ಕವಿ , ತನ್ನ ರಾಜನ ಕುರಿತು ಕಾವ್ಯದ ಶ್ರೇಷ್ಠತೆಯೆಂದು ಪರಿಗಣಿಸಲಾಗಿರುವ ‘ನೌರಸ್ ಮನ್ ಜ್ಯರ್ಫ್ ‘ ಸಂಯೋಜಿಸಿದರು.
ರಾಜ್ಯದಲ್ಲಿನ ವೈದ್ಯರು ಯುನಾನಿ, ಆಯುರ್ವೇದ,ಇರಾನಿ ಮತ್ತು ಯುರೋಪಿಯನ್ ಔಷಧ ವ್ಯವಸ್ಥೆಗಳನ್ನು ಉಪಯೋಗಿಸುತ್ತಿದರು.ಮಹಾನ್ ಇತಿಹಾಸಕಾರ ಫರಿಶ್ತಾ ಪರಿಣಿತ ಆಯುರ್ವೇದಿಕ್ ವೈದ್ಯರಾಗಿದ್ದರು. ಅವರು, ಸಂಸ್ಕೃತ ಜ್ಞಾನ ಹೊಂದಿದ್ದರಿಂದ ಅನೇಕ ಆಯುರ್ವೇದ ಪುಸ್ತಕಗಳನ್ನು ಅಧ್ಯಯನ ಮಾಡಿದ್ದರು.
ಸಂಗೀತ ಇಬ್ರಾಹಿಂ ಆದಿಲ್ ಷಾ-೨ ಅಡಿಯಲ್ಲಿ ಹೆಚ್ಚಿನ ಉತ್ತೇಜನ ಪಡೆಯಿತು. ಖುದ್ದು ಅವರೇ ಆ ಸಮಯದ ಮಹಾನ್ ಸಂಗೀತಗಾರರಾಗಿದ್ದರು.ಅವರು ಕವಿ, ಹಾಡುಗಾರ ಮತ್ತು ಸಂಗೀತಗಾರರ ದೊಡ್ಡ ಸಂಖ್ಯೆಯ ಗುಂಪುಗಳನ್ನು (ಲಷ್ಕರ್-ಎ-ನೌರಸ್) ಪೋಷಿಸುತ್ತಿದ್ದರು. ಹಲವಾರು ವರ್ಣಚಿತ್ರಗಳಲ್ಲಿ ಇಬ್ರಾಹಿಂ ಆದಿಲ್ ಷಾ -೨ ಅವರನ್ನು ” ತಂಬೂರಿ ”,” ಸಿತಾರ್”,” ವೀಣಾ” ಮತ್ತು” ಗಿಟಾರ್” ಗಳನ್ನೂ ನುಡಿಸುತ್ತಿರುವಂತೆ ಚಿತ್ರಿಸಲಾಗಿದೆ.
0 Comments