Input license here

ಇತ್ತೀಚಿನ ಪೋಸ್ಟ್‌ಗಳು

ಪ್ರಕೃತಿಯಂತೆ ಕವಿಯ ಮನಸು

 ಪ್ರಕೃತಿಯಂತೆ ಕವಿಯ ಮನಸು
ವಿಪುಲ ರೂಪ ಧಾರಿಣಿ |
ಬ್ರಹ್ಮನೆದೆಯ ಕನಸಿನಂತೆ
ಕೋಟಿ ಕಲ್ಪ ಗಾಮಿನಿ ||ಪ್ರ ||

ಕಡಲಿನಂತೆ ಕವಿಯ ಮನಸು
ರತ್ನ ಗರ್ಭ ರಾಗಿಣಿ ||
ಯುಗ ಯುಗಗಳ ನಶ್ವರಕೆ
ಅಮೃತ ಕವಚ ದಾಯಿನೀ ||ಪ್ರ||

ಬಾನಿನಂತೆ ಕವಿಯ ಮನಸು
ಭಾವ ಮೇಘ ಚಾರಿಣಿ ||
ಬೆಂದ ಭುವಿಯ ಹಸುರಿನೆದೆಗೆ
ರುಚಿರ ವರ್ಷ ರೂಪಿಣಿ ||ಪ್ರ||

-ಜಿ. ಎಸ್. ಶಿವರುದ್ರಪ್ಪ

Post a Comment

0 Comments