ಮಲ್ಲಿಗೆ ಹೂವಾಗಿ ಚೆಲ್ಲಿದೂ ನಿನ್ಪರಸೆ
ಚೆಲ್ಲಾಟಗಾರ ಮಾದಪ್ಪ
ಓಹೋ ಚೆಲ್ಲಾಟಗಾರ ಮಾದಪ್ಪ ನಿನ್ಪರಸೆ
ಕಲ್ಹತ್ತಿ ಕಣಿವೆ ಇಳಿದಾವೊ ||
ಮಾದಪ್ಪ ಬರುವಾಗ ಮಾಳೆಪ್ಪ ಘಮ್ಮೆಂದು
ಮಾಳದಲಿ ಗರಿಕೆ ಚಿಗುರ್ಯಾವೊ | ಮಾದಪ್ಪ
ಮೂಡಣದಿ ಮಳೆಯ ಸುರಿದಾವೊ ||
ಗಂಡುಗಲ್ಲಿನ ಮೇಲೆ ಗಂಡ್ಹುಲಿಯ ಕುಳ್ಳಿರಿಸಿ
ಗೊಂಡೆಯ ಕೊವ್ದಿ ಬಿಗಿ ಮಾಡಿ | ಮಾದೇವ
ಗಂಡ್ಹುಲಿಯ ಮೇಲೆ ಮೆರೆದಾನೊ ||
ಹೊತ್ತು ಮುಳುಗಿದರೇನು ಕತ್ತಲಾದರೇನು
ಅಪ್ಪಾ ನಿನ ಗುಡಿಗೆ ಬರುವೇನು | ಮಾದಪ್ಪ
ಮುತ್ತಿ ನ ಬಾಗೀಲ ತೆರೆದೀರು
ಸ್ವಾಮಿ ಮುತ್ತಿನ ಬಾಗೀಲ ತೆರೆದೀರು ||ಮ||

0 Comments