Input license here

ಇತ್ತೀಚಿನ ಪೋಸ್ಟ್‌ಗಳು

ಕಛೇರಿ ಪೇಟೆ ಬಸ್ಟಾಪು

 ಕಛೇರಿ ಪೇಟೆ ಬಸ್ಟಾಪು ಎಲ್ಲೆಲ್ಲು ಈತನೆ ಇವನೂ ಸಹ ಎಲ್ಲರಂತೆ ಅಚ್ಚ ಭಾರತೀಯನೆ

ಇರುವುದಿಲ್ಲಿ ಹೊಲ ಅಂಗಡಿ ಮುತ್ತಾತನ ಹಳೆಮನೆ
ರಾಷ್ಟ್ರ ಭಾಷೆಯಲ್ಲಿ ಒಂದು ತೊದಲ ಬಹುದು ನಾಲಿಗೆ
ವಿದ್ಯೆಯೆ ಇಳಿ ವಯಸ್ಸಿನಲ್ಲೂ ಅರ್ಧ ನರ್ಸರಿ ಶಾಲೆಗೆ
ಆ ಬಡ್ಡಿ ಬ್ಯಾಂಕು ಲೆಕ್ಕ ಪತ್ರ ತೆರಿಗೆಯ ತಯಾರಿಗೆ ಜ್ಞಾನವೇಕೆ ?
ನಮೋ ಎನ್ನಿ ಸರಸ್ವತಿಯ ವೈರಿಗೆ

ಅಸಮಾನ್ಯನಿವನಿಗೆ ಶ್ರೀ ಸಾಮನ್ಯನ ಬಿರುದು
ಮೈಯೆಲ್ಲ ಬರಿ ಹೊಟ್ಟೆಯ ತಲೆಯನ್ನೆಲ್ಲ ಮೇದು

ಗಲಭೆ ಗಾಳಿ ಸರಕುಗಳಿಗೆ ನಾಡ ಹಡಗ ಬಿರುಕುಗಳಿಗೆ ಇವನೇ ಸ್ವಾಮಿ ನಾಂದಿ
ರಾಜರಸ್ತೆ ತುಳಿಯಲಾರ ಮೆಚ್ಚು ಸಂದಿ ಗೊಂದಿ
ಮುಷ್ಕರ ಮೆರವಣಿಗಳಲಿ ಕುದುರೆ ಪಂದ್ಯ ಸಿನಿಮಾಗಳಲಿ ಮೊದಲ ಸಾಲು ಮುತ್ತುವಾತ
ಅಹಾ ಸಿಳ್ಳು ಚಪ್ಪಾಳೆಯಿಂದ ಸಭೆಗೆ ಕಳೆಯ ಕಟ್ಟುವಾತ

ಅಲ್ಲಿ ನಾಡಿನ್ನುತ್ತರದಲಿ ಕಾಶ್ಮೀರದ ಹತ್ತಿರದಲಿ ಲಡಖಿನಲ್ಲಿ ದೀಫದಲ್ಲಿ ತಾಯ್ ನೆಲೆವ ಕಬಳಿಸುತಿರೆ ನೆರೆ ಹೊರೆಯ ಭೂತ
ಎರಡಂಗುಲ ನೆಲದಂಚಿಗೆ ತಮ್ಮನನ್ನೆ ಕೋರ್ಟಿಗೆಳೆದು ಊರೂರು ಅಲೆಯುವಾತ ಇವನೇ ಆ ಮಹಾನುಭಾವ

ಎಷ್ಟು ಚಕ್ರ ಭಾರತಾಂಬೆ ನಿನ್ನ ಹಿರಿಯ ತೇರಿಗೆ ಪಾವಿನಷ್ಟು ಗಟ್ಟಿ ಹಾಲು ಎರಡು ಸೇರು ನೀರಿಗೆ
ಕುಡಿಯ ಬೇಡಿ ಸೇಂದಿ ಅಂದರಂದು ಗಾಂಧಿ ಒಡನೆ ಬಿಟ್ಟಾ ಸೇಂದಿ ಹಿಡಿದನಿವನು ಬ್ರಾಂದಿ

ಗಡಿಯ ತುಂಬ ಗಡಿಬಿಡಿ
ದೇಶವನ್ನೆ ದಹಿಸುತಿದೆ ಅಭಾವ ಕ್ಷಾಮದ ಕಿಡಿ
ವಾರಕೊಮ್ಮೆ ಊಟ ಬಿಡಿ ಪ್ರಧಾನಿವರ್ಯರ ನುಡಿ
ಬಿಟ್ಟನೀತ ಅನ್ನ ಕಾರಣ ಅಜೀರ್ಣ
ಇವನೂ ಸಹ ನಮ್ಮವನೆ ಇವನು ಭಾಸರತೀಯನೇ

-ಕೆ.ಎಸ್.ನಿಸಾರ್ ಅಹಮದ್

Post a Comment

0 Comments