ಮಲೆತು ನಿಂತ ವೈರಿಗಳನು
ಗೆಲಿದು ನನ್ನೀ ನಲುಮೆಯಲೀಯೇ
ಚೆಲುವಿನಿಂದ ಇಳೆಯನ್ನಾಳಿ
ಬಲಹುಗಾರರೆಂದು ನಲಿವ ಭಾರತೀಯರು ನಾವು
ಭೋಗಗಳಿಗೆ ನೀರನೀಡಿ
ತ್ಯಾಗದಲಿಯೇ ಭೋಗ ನೋಡಿ
ಯೋಗೀಶ್ವರನೊಡನೆ ಬೆರೆಯೇ
ಯೋಗ ಪಥವ ಕಂಡು ಹಿಡಿದ ಭಾರತೀಯರು ನಾವು
ಭಾವನೆಗಳ ಕೊಳಲನೂದಿ
ಭಾವರಾಗಗಳನೇ ಹಾಡಿ
ದೇವರಾಯನೊಡನೆ ಆಡಿ
ಸಾವನೋವ ತುಳಿದು ನಿಂತ ಭಾರತೀಯರು ನಾವು
- ಬೆಟಗೇರಿ ಕೃಷ್ಣ ಶರ್ಮ

0 Comments