ಓಂ ತತ್ಸತ್ ಶ್ರೀ ನಾರಾಯಣನೀ | ಪುರುಷೋತ್ತಮ ಗುರು ನೀ |

ಸಿದ್ಧ ಬುದ್ಧನೀ ಸ್ಕಂದ ವಿನಾಯಕ | ಸವಿತಾ ಪಾವಕ ನೀ ||

ಬ್ರಹ್ಮ ಮಜ್ಜನೀ | ಯಹ್ವಶಕ್ತಿನೀ | ಏಸುಪಿತಾ ಪ್ರಭುನೀ |

ರುದ್ರ ವಿಷ್ಟುನೀ | ರಾಮಕೃಷ್ಣನೀ | ರಹೀಮ ತಾಮೋ ನೀ ||

ವಾಸುದೇವ ಗೋ | ವಿಶ್ವರೂಪ ನೀ | ಚಿದಾನಂದ ಹರಿ ನೀ |

ಅದ್ವಿತೀಯ ನೀ | ಅಕಾಲ ನಿರ್ಭಯ | ಆತ್ಮಲಿಂಗ ಶಿವ ನೀ | ಓಂ |