Input license here

ಇತ್ತೀಚಿನ ಪೋಸ್ಟ್‌ಗಳು

ಕಾದಿರುವಳು ಶಬರಿ

 ರಾಮ.... ರಾಮ....ರಾಮ....

ಕಾದಿರುವಳು ಶಬರಿ
ರಾಮ ಬರುವನೆಂದು |
ತನ್ನ ಪೂಜೆಗೊಳುವನೆಂದು||

ವನವನವ ಸುತ್ತಿ ಸುಳಿದು
ತರುತರುವ ನಲೆದು ತಿರಿದು
ಬಿರಿ ಹೂಗಳಾಯ್ದು ತಂದು
ತನಿವಣ್ಗಣಾಯ್ದು ತಂದು |

ಕೊಳದಲ್ಲಿ ಮುಳುಗಿ ಮಿಂದು
ಬಿಳಿನಾರು ಮಡಿಯನುಟ್ಟು
ತಲೆವಾಗಿಲಿಂಗೆ ಬಂದು
ಹೊಸಿತಿಲಲಿ ಕಾದು ನಿಂದು |

ಬಾ ರಾಮ ರಾಮ ಎಂದು
ಬರುತಿಹನು ಇಹನು ಎಂದು
ಹಗಲಿರುಳು ತವಕಿಸುತಿಹಳು
ಕಳೆದಿಹವು ವರುಷ ಹಲವು |

ಬಂದಾನೋ ಬಾರನೋ
ಕಂಡಾನೋ ಕಾಣನೋ
ಎಂದೆಂದು ತಪಿಸಿ ಜಪಿಸಿ
ಶಂಕಾತುರಂಗಳೂರಿ |

ಬಾ ರಾಮ ಬಾರ ಬಾರ
ಬಡವರನು ಕಾಯಿ ಬಾರ
ಕಂಗಾಣದಿವರ ಪ್ರೇಮ
ನುಡಿ ಸೋತ ಮೂಕ ಪ್ರೇಮ |

- ವಿ. ಸೀತಾರಾಮಯ್ಯ

Post a Comment

0 Comments