ಜೋಪಾನ, ಜೋಕೆ ಜೋಪಾನ
ನನ್ನ ಹ್ರುದಯ ಕದಿಯೊ ಕಳ್ಳ ಬಂದ ಜೋಪಾನ
ಸೋತೆನಾ, ಪೂರ್ತಿ ಸೋತೆನಾ
ಇವನ ನಡತೆ ನೋಡಿ ಮತ್ತೆ ಮತ್ತೆ ಸೋತೆ ನಾ

ಸುಳಿದರು ಕಣ್ಣ ಮುಂದೆ ಹುಡುಗರು ನೂರು
ಸರಿಸಮ ಯಾರಿಲ್ಲ ಇವನಿಗೆ ಚೂರು
ಇವನನು ಹೆತ್ತವರು ಯಾರೋ

ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು
ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು

ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು

ಕನಸಿನ ಕಾರುಬಾರು ನಡೆದಿದೆ ಜೋರು
ಕೆಡಿಸಲೆ ಬೇಡಿ ನಮ್ಮ ಖುಷಿಯನು ಯಾರು

ಸುಮ್ಮನೆ ಸಾಗಿದೆ ಎದೆಯಲಿ ನಿನ್ನದೆ ಉತ್ಸವ
ನೀನೆ ನಾನಾಗುವ ಎಂತಹ ಒಂದು ಹಾಯಾದ ಭಾವ

ಜಿನು ಜಿನುಗೊ ಹನಿ ಹನಿ
ಮಳೆಯಲಿ ನಡೆಯುವ ಆಸೆ
ಕೊಡೆ ಹಿಡಿದು ಜೊತೆ ಜೊತೆ
ಜೊತೆಯಲಿ ಬರುವೆಯ ಕೂಸೆ

ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು
ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು

ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು
ಯಾರೋ ನೀನು

 Watch YouTube video