ಸಾಗರದ ಅಲೆಗೂ ಧಣಿವು
ಪರ್ವತಕೂ ಬೀಳೋ ಭಯವು
ಮಳೆಯ ಹನಿಗೂ ಬಂತು ನೋಡು ದಾಹ
ಶಶಿಗೆ ಕಳಚಿ ಹೋಯ್ತು ಖುಷಿಯ ಸ್ನೇಹ
ಹಾರಾಡೋ ಮೋಡವಿಂದು ರೆಕ್ಕೆಗಳ ಮುರಿದುಕೊಂಡು ನಿಂತಿದೆ ಮಂಕಾಗಿ ಸುಮ್ಮನೆ
ತಂಗಾಳಿ ಅಂಗಳವು ದಂಗಾಗಿ ಬೆವರಿರೋ ಸೂಚನೆ
ಸಾಗರದ ಅಲೆಗೂ ಧಣಿವು
ಬೆಂಕಿ ಮಳೆಗೆ ಬೆಂದ ಮೇಲೆ ಹೂವು
ಹೇಗೆ ತಾನೇ ಕಾಣಬೇಕು ಮಗುವು
ಬೇಸರದ ರಾಟೆಯು ಎದೆಯಲಿ ತಿರುಗಿ
ತಿರುಗುವ ಈ ಭೂಮಿಯೇ ನಿಂತಿದೆ ಕೊರಗಿ
ಬದುಕಿನ ಹೊಸ ರೂಪದ ಪರಿಚಯವಾಗಿ
ಬೆಳೆಕೆ ಕಳೆದೋಗಿದೆ ಸೋಲಲಿ ಮುಳುಗಿ
ಎಲ್ಲೇ ನೋಡು ಹಳೆ ಗುರುತು
ಬಾಳೋದೆಗೆ ಎಲ್ಲಾ ಮರೆತು
ಬಯಸದೆ ನಾ ಎಲ್ಲಾ ಅಂದು
ಬಯಸಿದರೂ ಇಲ್ಲ ಇಂದು
ಈಜುವುದೇಗೆ ಕುದಿಯೋ ನದಿಯನ್ನ
ಚೂಪಾದ ಕಲ್ಲಿಂದ ಚೂರಾಯ್ತು ಕನಸಿನ ದರ್ಪಣ
ಸಾಗರದ ಅಲೆಗೂ ಧಣಿವು
ಕಾಲ ನೀನು ಮಾಯಾ
ಇಲ್ಲಾ ನಿನಗೆ ನ್ಯಾಯಾ
ವಾಸಿ ಮಾಡೋರ್ಯಾರು
ಒಳಗೆ ಆದ ಗಾಯ
ನಂಜು ಒಂದು ಹೃದಯ ಸವರಿ
ಮಂಜು ಕವಿದು ಮಬ್ಬು ದಾರಿ
ಗೆದ್ದಾಗ ಬೆನ್ನು ತಟ್ಟಿ
ಬಿದ್ದಾಗ ಮೇಲೆ ಎತ್ತಿ
ಜೊತೆಯಲಿ ನಿಲ್ಲೋರಿಲ್ಲ ಒಂಟಿ ನಾ
ಆಸೆಗಳ ಆಕಾಶ ಪಾತಾಳ ಮುಟ್ಟಿದೆ ನಾ
ಸಾಗರದ ಅಲೆಗೂ ಧಣಿವು
ಬೆಂಕಿ ಮಳೆಗೆ ಬೆಂದ ಮೇಲೆ ಹೂವು
ಹೇಗೆ ತಾನೇ ಕಾಣಬೇಕು ಮಗುವು
Watch YouTube video
0 Comments