Input license here

ಇತ್ತೀಚಿನ ಪೋಸ್ಟ್‌ಗಳು

ಯಾಕಿಂಗಾಗಿದೆ ( ರಾಜಕುಮಾರ ಚಲನಚಿತ್ರ)

ಹೋಗಿ ಬಂದು ನಂಗೊಬ್ಬನಿಗೆ ಯಾಕಿಂಗಾಗಿದೆ ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ
ಕುಳಿತುಕೊಂಡು ಕವಿತೆಯನ್ನು ಬರದೇ ಇದ್ರೂ ಬರೆದೆ ನಾನು ಅದೇನೇ ಗ್ರಾಮರ್ ಮಿಸ್ಟೇಕ್ ಇದ್ರೂ ಆಶೀರ್ವದಿಸಿ
ಹೋಗಿ ಬಂದು ನಂಗೊಬ್ಬನಿಗೆ ಯಾಕಿಂಗಾಗಿದೆ ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ

ಇಷ್ಟುದ್ದದ ಮಾತೊಂದ ಪ್ರಾಕ್ಟಿಸು ಮಾಡಿದ್ದೆ ಇವಳ ಎದುರು ಏನೂ ನೆನೆಪೇ ಆಗಲ್ಲ
ವಾಟ್ಸಪ್ಪಲ್ಲಿ ಹೂವನ್ನ ಎಷ್ಟು ಅಂತ ಕಳಿಸೋದು ಫೀಲಿಂಗಿಗೆ ಟೆಕ್ನಾಲಜಿ ಸಾಲಲ್ಲ
ಸೆಲ್ಫಿ ತೆಗಿಯೋ ಟೈಮಲಿ ಹುಡುಗಿ ತುಂಬಾ ವಾಲುವಳು
ಎಷ್ಟೇ ಹತ್ರ ನಿಂತ್ರು ಇನ್ನು ಹತ್ರ ಎನ್ನುವಳು
ಹರೆಯ ಒಂದು ಟಚ್ಚು ಸ್ಕ್ರೀನು ಲವ್ ಮಾಡೋಕು ಬೇಕು ಫೋನು
ನಂದಂತೂ ಮೊಬೈಲ್ ಆಫಗಲ್ಲ ಆಶೀರ್ವದಿಸಿ
ಹೋಗಿ ಬಂದು ನಂಗೊಬ್ಬನಿಗೆ ಯಾಕಿಂಗಾಗಿದೆ ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ

ಲಿಪ್ಸ್ಟಿಕ್ಕಿನ ಮಾರ್ಕೊಂದು ಬೇಕಾಗಿದೆ ನನಗಿಂದು
ಸಾಕಾಗೋಯ್ತು ಹಾಳು ಕೆನ್ನೆಯ ಬರಗಾಲ
ಇಂತ ಆಸೆಗೆ ಹುಡುಗೀರು ಸೊಪ್ಪು ಗಿಪ್ಪು ಹಾಕಲ್ಲ
ಇವರಿಂದಾನೇ ಕಮ್ಮಿ ಆಯಿತು ಮಳೆಗಾಲ
ಅಂತಾರಪ್ಪ ಹುಡುಗಿರೆಂದೂ ಅರ್ಥ ಆಗಲ್ಲ
ಅರ್ಥ ಮಾಡ್ಕೊಳ್ಳೋದು ನಮಗೂ ಬೇಕಾಗೂ ಇಲ್ಲ
ಕನಸು ಕಾಣೋ ವಯಸಿಗೊಂದು ಕೆಲಸ ಕೊಟ್ಲು ಇವಳು ಬಂದು
ಇನ್ಮುಂದೆ ನಾನು ತುಂಬಾ ಬ್ಯುಸಿ ಆಶೀರ್ವದಿಸಿ
ಹೋಗಿ ಬಂದು ನಂಗೊಬ್ಬನಿಗೆ ಯಾಕಿಂಗಾಗಿದೆ ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ.\

 Watch YouTube video

Post a Comment

0 Comments