Input license here

ಇತ್ತೀಚಿನ ಪೋಸ್ಟ್‌ಗಳು

ಸೆಲ್ಫ್ ಮೇಡು ಶೇಹಝ್ಹಾದ ( ಸಂತು ಸ್ಟ್ರೈಟ್ ಫಾರ್ವರ್ಡ್ ಚಲನಚಿತ್ರ )

 

ಹೇಳೋರ ಮಾತು ಕೇಳು ಗುರು ಸ್ವಲ್ಪ ತಗ್ಗಿ ಬಗ್ಗಿ ನಡಿಯುತಿರು
ಅದು ಆಗಲ್ಲ ಇದು ಹೋಗಲ್ಲ ಅಡ್ವಯಿಸೆಲ್ಲಾ ಇವರಿಗಂಟಲ್ಲ
ಕಿರಿಕ್ಕ ಎಲ್ಲಾ ಬೇಕಾ ಗುರು ಕೆಳಗಿಳಿಸು ನಿನ್ನ ಕಾಲರು
ಕೆಳಗಿಳಿಯಲ್ಲ ಅದು ನಡೆಯಲ್ಲ ಹುಲಿ ಎಂದೂ ವೆಜ್ಜು ತಿನ್ನಲ್ಲ
ಸುನಾಮಿಗೆ ಸೈನ್ಬೋರ್ಡ್ ಇಡಬೇಡ ಸ್ಟೆಥಾಸ್ಕೊಪ ಸಿಡಿಲಿಗೆ ಹಿಡಿಬೇಡ ಕತ್ತಿಗೆ ಕರುಣೆಯ ಪಾಠ ಬೇಡ
ಬೊಧನೆ ಕೇಳುವ ವಯಸು ಮುಂದಿದೆ
ಮಾಡೋದೇ ಬೇಡ ರೀ ವಾದ
ಇವ ಸೆಲ್ಫ್ ಮೇಡು ಶೇಹಝ್ಹಾದ
ಸುಂಸುಮ್ನೆ ಟಕ್ಕರು ಯಾಕೆ ಗುರು ಆಗಾಗ ಸ್ವಲ್ಪ ತೆಪ್ಪಗಿರು
ಬಾಸು ಬಗ್ಗಲ್ಲ ಅವರು ಬಗ್ಗಲ್ಲ ಇವರು ಸುಮ್ನಿದ್ರೆ ಸೂಟ್ ಆಗಲ್ಲ

ಬಿದ್ದೋನು ಏಳಲೇ ಬೇಕು
ಎದ್ದನೋ ಬೀಳಲೇ ಬೇಕು
ಇದುವೇ ಜಗದ ನಿಯಮ
ಗೆದ್ದೋನು ಓಡಲೇ ಬೇಕು
ಬಿದ್ದೋನು ಓಡಲೇ ಬೇಕು
ತಿಳಿಯೋ ಜಗದ ಮರ್ಮ
ಯಾಕೆ ಬೇಕು ಸ್ಪೀಡು
ಸ್ಮುತಾಗಿರಲಿ ರೈಡು
ಇಂಥ ಆಟಿಟ್ಯೂಡು ಆರೋಗ್ಯಕ್ಕೆ ಬ್ಯಾಡು
ರಾಕೆಟ್ಟಿಗೆ ಸ್ಪೀಡ್ ಲಿಮಿಟ್ ಹಾಕಬೇಡ
ಆಕಾಶಕ್ಕೆ ಟೇಪನು ಹಿಡಿಬೇಡ
ಸೈರೆನ್ನಿಗೆ ಸೈಲೆನ್ಸ್ ಹೇಳಬೇಡ
ಬೊಧನೆ ಕೇಳುವ ವಯಸು ಮುಂದಿದೆ
ಮಾಡೋದೇ ಬೇಡ ರೀ ವಾದ
ಇವ ಸೆಲ್ಫ್ ಮೇಡು ಶೇಹಝ್ಹಾದ

ಚಿಕ್ಕೋರಿಗೆ ಚಿಕ್ಕೊನೆ ಆಗು
ದೊಡ್ಡವರಿಗೆ ದೊಡ್ಡೋನೆ ಆಗು
ಚಿಕ್ಕೋನು ದೊಡ್ಡೋನು ಒಮ್ಮೆ
ದೊಡ್ಡೋನು ಚಿಕ್ಕೋನು ಒಮ್ಮೆ ಬದುಕು ಚಕ್ರದಂಗೆ
ಯಪ್ಪಾ ಎಂಥ ಟಾರ್ಚರ್ ಯಾರೋ ನಿನ್ನ ಟೀಚರ್
ಉಲ್ಟಾ ಸೀದಾ ನೇಚರ್ ಹೆಂಗೋ ನಿನ್ನ ಫ್ಯೂಚರ್
ಸೂರ್ಯಂಗೆ ವ್ಯಾಲಿಡಿಟಿ ಚಿಂತೆ ಬೇಡ
ಹಾವಿಗೆ ಮುತ್ತಿಡೋ ಆಟ ಬೇಡ
ಓಡೋ ಟ್ರೈನಿಗೆ ಡಿಚ್ಚಿ ಹೊಡಿಬೇಡ
ಬೊಧನೆ ಕೇಳುವ ವಯಸು ಮುಂದಿದೆ
ಮಾಡೋದೇ ಬೇಡ ರೀ ವಾದ
ಇವ ಸೆಲ್ಫ್ ಮೇಡು ಶೇಹಝ್ಹಾದ
ಅಡವರ ಬಾಯಿಗೆ ಸಿಕ್ಕದಿರು ಹ್ಹೂ ಅನ್ಕೊಂಡು ಹೇಂಗೂ ಸೇಫ್ ಆಗಿರು
ಬಾಸ್ ಬಗ್ಗಲ್ಲ ಅವರು ಜಗ್ಗಲ್ಲ ಇವರು ಸುಮ್ನಿದ್ರೆ ಸೂಟಾಗಲ್ಲ
ಸೆಲ್ಫ್ ಮೇಡು ಶೇಹಝ್ಹಾದ

 Watch YouTube video

Post a Comment

0 Comments