Input license here

ಇತ್ತೀಚಿನ ಪೋಸ್ಟ್‌ಗಳು

ನೀಚ ಸುಳ್ಳು ಸುತ್ತೊ ನಾಲಿಗೆ ( ಕಿರಿಕ್ ಪಾರ್ಟಿ ಚಲನಚಿತ್ರ )

 

ನೀಚ ಸುಳ್ಳು ಸುತ್ತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲ ಕಂಡಿಸೊ
ನಿನ್ನ ಕಂಡರೆ ರಕ್ತ ಕುದಿತಿದೆ

ನೀಚ ಸುಳ್ಳು ಸುತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲ ಕಂಡಿಸೊ
ನಿನ್ನ ಕಂಡರೆ ರಕ್ತ ಕುಡೀತಿದೆ

ಸುಳ್ಳೊಂದು ಭೂದಿಯಲಿ ಮುಚ್ಚಿರುವ ಕೆಂಡದಂತೆ
ಎಲ್ಲ ಹತ್ತಿ ಉರಿದ ಮೇಲೂ ಹೊಗೆಯಾಗೋ ಆಸೆಯಂತೆ

ಹದ್ದು ಮೀರಿ ಮಾತಾಡೊ ಮಜುನನಲ್ಲಿ ಮನಸಿಲ್ಲ
ಸಾವು ಸೆರೆಗೆ ಸಿಕ್ಕಾಗ ನಿನ್ನ ನೆರಳ ಉಳಿಸೊಲ್ಲ

ಕಟ್ಟು ಕಥೆಗೆ ಕಿವಿಕೊಡುವ ಕೀಚಕರ ಕಸರತ್ತು
ಸಾವಿನಲ್ಲೂ ಸರಿ ತಪ್ಪು ಹುಡುಕಾಡಿ ಬಿಡೋ ಹೊತ್ತು

ಬದುಕಿ ಬಾಳುವವರನು ಕಂಡರೆ ಕಿಡಿ ಗಿಚ್ಚು
ಸತ್ತು ಹೋದ ಮೇಲೂ ಬಿಡದು ನಿಮ್ಮ ಈ ಒಳ ಸಂಚು

ಇಂಥ ಜನರ ಉಳಿಸಬೇಡ ಕರ್ಕೊಂಡೋಗೋ ಭಗವಂತ
ನೆಪ ಹೇಳೋ ನೆಪದಲ್ಲಿ ಯಾರು ಇಲ್ಲ ಜೀವಂತ

ನೀಚ ಸುಳ್ಳು ಸುತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲ ಕಂಡಿಸೊ
ನಿನ್ನ ಕಂಡರೆ ರಕ್ತ ಕುಡೀತಿದೆ

ಉರಿವವರು ಉರಿಯುತ್ತಾ ಉರಿದುರಿದು ಹೋಗುವರು
ಕುದಿವವರು ಕುದಿಯುತ್ತಾ ಆವಿಯಾಗಿ ತೀರುವರು
ಮಾಡಿದವರ ಪಾಪಗಳು ಆಡಿದವರ ಬಾಯಲ್ಲಿ
ಬತ್ತಿ ಇತ್ತ ಕ್ಷಣದಲ್ಲೇ ಬಂತು ನಿನ್ನ ಬುಡದಲ್ಲೇ

ಕಾದಿದೆ ನೋಡು
ನಿನ್ ಹಿಂದೆ
ಹೆಗಲೇರ
ನಿನ್ನ ಬಲೆಗೆ ನೀನೇ ಸುತ್ತಿ ಸಿಲುಕಿಕೊಳ್ಳುವ ಬ್ರಾಂತಿ
ಆಡಿದಂಥ ಆಟಕೆಲ್ಲಾ ಲೆಕ್ಕ ಕೊಡಲೇ ಬೇಕು ಪೂರ್ತಿ
ಬಾ! ಹೆದರಿಸು ಬಾ!

ಬಾ ಬಾ ಬಾ ಬಾ

ಕಡುಕ ಕಾಡು ಪಾಪಿ ಕಟ್ಟಿರುವ ಕಡುಕೋಟೆ ಕೆಡವುವೆನು ಬಾ!
ಸೆಣೆಸಲು ಬಾ!
ಬಾ ಬಾ ಬಾ ಬಾ


Watch YouTube video

Post a Comment

0 Comments