Input license here

ಇತ್ತೀಚಿನ ಪೋಸ್ಟ್‌ಗಳು

ಆವ ಯೋಚನೆಯು ( ಕುರುಕ್ಷೇತ್ರ ಚಲನಚಿತ್ರ )

 

ಹೇ… ಭರತ ವಂಶಜ
ಆವ ಯೋಚನೆಯೂ ಬೇಡ ಪಾರ್ಥ
ಅವರವರ ಕರ್ಮಾನುಸಾರ
ಭವಸಾಗರ ಪಾರ್ಥ…
ಹುಟ್ಟಿದವ ಮರಣಿಸಲೇ ಬೇಕು
ಮರಣಿಸಿದವ ಮತ್ತೆ ಹುಟ್ಟಲೆ ಬೇಕು
ಕೊಲುವವನು ನೀನಲ್ಲ
ಸಾಯುವವನವನಲ್ಲ
ಪರಿವರ್ತನೆ ಜಗದ ನಿಯಮ
ಇದುವೇ ನಿಸರ್ಗ ಧರ್ಮ
ಸರ್ವಜೀವಾತ್ಮದೊಳಿರುವ ಪರಮಾತ್ಮ ನಾನೇ
ಆದಿ ನಾನೇ… ಅಂತ್ಯ ನಾನೇ…
ಅಚಿಂತ್ಯ ನಾನೇ… ಅಗಮ್ಯ ನಾನೇ…
ಅಗೋಚರ ನಾನೇ… ಆತ್ಮ ನಾನೇ…
ಸರ್ವ ಮೃಗ ಖಗ ನರ ಜೀವ ಸಂಕುಲವು ನನ್ನೊಳಗೆ

ಯದಾ ಯದಾ ಹಿ ಧರ್ಮಸ್ಯ
ಗ್ಲಾನಿರ್ಭವತಿ ಭಾರತ
ಅಬ್ಯುಥಾನಂ ಆಧರ್ಮಸ್ಯ
ತದಾತ್ಮಾನಂ ಸೃಜಾಮ್ಯಹಂ
ಪರಿತ್ರಾಣಾಯ ಸಧುನಾಂ
ವಿನಾಶಾಯ ಚ ದುಷ್ಕೃತಾಂ
ಧರ್ಮ ಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ

Watch YouTube video

Post a Comment

0 Comments