ಈ ಕನ್ನಡ ಮಣ್ಣನು ಮರೀಬೇಡ ( ಸೋಲಿಲ್ಲದ ಸರದಾರ ಚಲನಚಿತ್ರ )
ಕನ್ನಡ
ರೋಮಾಂಚನವೀ ಕನ್ನಡ
ಕಸ್ತೂರಿ ನುಡಿಯಿದು,
ಕರುಣಾಳು ಮಣ್ಣಿದು
ಚಿಂತಿಸು, ವಂದಿಸು,
ಪೂಜಿಸು, ಪೂಜಿಸು
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಸುಸಂಸ್ಕೃತ ಚರಿತೆಯ
ತಾಯ್ನಾಡು
ಮಹೋನ್ನತ ಕಲೆಗಳ
ನೆಲೆವೀಡು
ಕೆಡಿಸದಿರು ಈ ಹೆಸರ,
ಈ ಹೆಸರ
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಹಾಡಾಗಲಿ ಗೂಡಾಗಲಿ
ನಾಡಾಗಲಿ
ಕಟ್ಟೋಕೆ ನಾನಾದಿನ,
ಕೆಡವೋಕೆ ಮೂರೇ ದಿನ
ಹರಸಿದರು ಮುನಿಗಳು,
ಗಳಿಸಿದರು ಕಲಿಗಳು
ನೆತ್ತರದಿ ನೆಚ್ಚಿನ
ಈ ಮೆಚ್ಚಿನ ಸಾಮ್ರಾಜ್ಯವ
ಹಾಡಿದರು ಕವಿಗಳು,
ಕರಗಿದವು ಶಿಲೆಗಳು
ತುಂಬಿದರು ಎದೆಯಲಿ
ಸಿರಿಗನ್ನಡ ಅಭಿಮಾನವ
ಕನ್ನಡ
ರೋಮಾಂಚನವೀ ಕನ್ನಡ
ಹಾಡಿಸು, ಕೇಳಿಸು, ಪ್ರೀತಿಸು
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಜ್ಞಾನ ಇದೆ, ಚಿನ್ನ ಇದೆ,
ಕಾವೇರಿ ಇದೆ
ಬಡತನವೆ ಮೇಲಾಗಿದೆ,
ನಮ್ಮತನವೆ ಮಂಕಾಗಿದೆ
ಯಾರಿಹರು ನಿಮ್ಮಲಿ,
ಮದಕರಿಯ ನಾಯಕ
ಕೆಚ್ಚೆದೆಯ ಎಚ್ಚಮ,
ರಣಧೀರರು ನುಡಿದಾಸರು
ಉಳಿದಿಹುದು ನಿಮ್ಮಲಿ,
ಹೊಯ್ಸಳರ ಕಿಡಿಗಳು
ಹೊನ್ನ ಮಳೆ ಸುರಿಸಿದ,
ಅರಿರಾಯರ ತೋಳ್ಬಲಗಳು
ಏಳಿರಿ, ಏಳಿರಿ,
ಈ ಪ್ರಾರ್ಥನೆಯ ಕೇಳಿರಿ
ಕಲಿಯಿರಿ, ದುಡಿಯಿರಿ,
ಉಳಿಸಿರಿ
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಸುಸಂಸ್ಕೃತ ಚರಿತೆಯ
ತಾಯ್ನಾಡು
ಮಹೋನ್ನತ ಕಲೆಗಳ
ನೆಲೆವೀಡು
ಕೆಡಿಸದಿರು ಈ ಹೆಸರ,
ಈ ಹೆಸರ
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
Watch YouTube video
0 Comments