ಏನ್ನೆನ್ನಲೆ ತಾಯಿ ಏನ್ನೆನ್ನಲೆ
ಏನ್ನೆನ್ನಲೆ ತಾಯಿ ಏನ್ನೆನ್ನಲೆ
ಬದುಕೀನಾ ಈ ಪರಿಗೆ ಏನ್ನೆನ್ನಲೆ ... ೨
ಗುಡ್ಡಾದಂಚಿಗೆ ಬೆಳ್ಳಿ ಚೆಲ್ಲುವ ಚಂದಿರಗೆ
ಗುಡ್ಡಾದಂಚಿಗೆ ಬೆಳ್ಳಿ ಚೆಲ್ಲುವ ಚಂದಿರಗೆ
ಬಾನಲ್ಲಿ ಕಣ್ಣಾ ಹೊಡೆಯುವ ಚುಕ್ಕಿಗೆ
ಬಾನಲ್ಲಿ ಕಣ್ಣಾ ಹೊಡೆಯುವ ಚುಕ್ಕಿಗೆ
ಹೊಳೆಯ ನೀರಿನ ಹೊಳೆವ ತೆರೆಗಳಾ ನಗಿಸುವ
ಹೊಳೆಯ ನೀರಿನ ಹೊಳೆವ ತೆರೆಗಳಾ ನಗಿಸುವ
ಕಿರಣಾವ ಹೆಣೆಯುವ ಸೂರ್ಯನಿಗೆ
ಕಿರಣಾವ ಹೆಣೆಯುವ ಸೂರ್ಯನಿಗೆ
ಏನ್ನೆನ್ನಲೆ ತಾಯಿ ಏನ್ನೆನ್ನಲೆ
ಚಿಮ್ಮುವ ಹೂವಿನಾ ಘಮ್ಮಾನಾ ವಾಸನೆ
ಚಿಮ್ಮುವ ಹೂವಿನಾ ಘಮ್ಮಾನಾ ವಾಸನೆ
ಸುಮ್ಮಾನ ಸಡಗರಕ್ಕೇನ್ನೆನ್ನಲೆ
ಸುಡುಗಾಡದೊಳಗಡೆ ಹೂ ಬಿಡುವ ಮುಳ್ಳಿಗೆ
ಸುಡುಗಾಡದೊಳಗಡೆ ಹೂ ಬಿಡುವ ಮುಳ್ಳಿಗೆ
ಏನೆಂಬಾ ಹೆಸರಿಂದ ನಾ ಕರೆಯಲೆ
ಏನೆಂಬಾ ಹೆಸರಿಂದ ನಾ ಕರೆಯಲೆ
ಕಷ್ಟ ಸಾವಿರವಿರಲಿ ದುಖಾಃ ಸಾವಿರವಿರಲಿ ಈ ಬದುಕು ನನಗಿರಲಿ ಹೋ ಶಿವನೇ
ಕಷ್ಟ ಸಾವಿರವಿರಲಿ ದುಖಾಃ ಸಾವಿರವಿರಲಿ ಈ ಬದುಕು ನನಗಿರಲಿ ಹೋ ಶಿವನೇ
ಸಾವಿರ ಮುಳ್ಳಿರಲಿ ಅದರಲ್ಲಿ ಒಂದಾರೆ
ಅರಳಿದ ಹೂವಿರಲಿ ಓ ದೇವರೆ
ಅರಳಿದ ಹೂವಿರಲಿ ಓ ದೇವರೆ
ಏನ್ನೆನ್ನಲೆ ತಾಯಿ ಏನ್ನೆನ್ನಲೆ
ಏನ್ನೆನ್ನಲೆ ತಾಯಿ ಏನ್ನೆನ್ನಲೆ
ಬದುಕೀನಾ ಈ ಪರಿಗೆ ಏನ್ನೆನ್ನಲೆ
ಏನ್ನೆನ್ನಲೆ ತಾಯಿ ಏನ್ನೆನ್ನಲೆ
ಬದುಕೀನಾ ಈ ಪರಿಗೆ ಏನ್ನೆನ್ನಲೆ
ಏನ್ನೆನ್ನಲೆ ತಾಯಿ ಏನ್ನೆನ್ನಲೆ
ಏನ್ನೆನ್ನಲೆ ತಾಯಿ ಏನ್ನೆನ್ನಲೆ
-ಚಂದ್ರಶೇಖರ ಕಂಬಾರ
0 Comments