ಯಾವ ದೇವಶಿಲ್ಪಿ ಕಡೆದನೊ ನಿನ್ನ
ಕವಿ ಕಾಳಿದಾಸ ಕಲ್ಪನೆಯೊ ಚಿನ್ನ
ಪ್ರೀತಿ ತೇರಿನಿಂದ ಏರಿಬಂದ ಚೆನ್ನ
ಬಿರುಗಾಳಿಯಂತೆ ಹೊತ್ತುಹೋದೆ ನನ್ನ
ಊರ್ವಶಿಯ ತಂಗಿಯೋ
ಮಾತನಾಡೋ ವೀಣೆಯೋ
ಮನ್ಮಥನ ತಮ್ಮನೋ
ವಾತ್ಸಾಯನನಣ್ಣನೋ
ನಿನ್ನಲೇ ನಾ ಸೇರಿಹೋದೇ..
ಯಾವ ದೇವಶಿಲ್ಪಿ ಕಡೆದನೊ ನಿನ್ನ
ಕವಿ ಕಾಳಿದಾಸ ಕಲ್ಪನೆಯೊ ಚಿನ್ನ
ಪ್ರೀತಿ ತೇರಿನಿಂದ ಏರಿಬಂದ ಚೆನ್ನ
ಬಿರುಗಾಳಿಯಂತೆ ಹೊತ್ತುಹೋದೆ ನನ್ನ
ತನು ಮನ ಎರಡರ ಮಿಲನಾ
ಹೊಸ ಕವನಾ ಇಂದು ಬರೆದಿದೆ
ನಯನವು ಮೌನದಿ ಸುಖದಾ
ಅನುಭವದಾ ಕಥೆ ಹೇಳಿದೆ
ನನ್ನ ತೋಳಿನಲ್ಲಿ ಇಂದು ಸೇರುಬಾ
ಓ.. ಪ್ರಿಯತಮೆ
ನನ್ನ ಬಾಳಿನಲ್ಲಿ ದೀಪ ಹಚ್ಚುಬಾ
ಓ.. ಪ್ರಿಯತಮ
ಮುದ್ದು. ಮುಖ. ನನ್ನ ಆಸೆ ಕೆಣಕಿದೆ
ತಾಳು ತಾಳು ಏಕೆಂದೇ
ಗುಂಗಲೀ ನಾ ತೇಲಿ ಹೋದೇ..
ಯಾವ ದೇವಶಿಲ್ಪಿ ಕಡೆದನೊ ನಿನ್ನ
ಕವಿ ಕಾಳಿದಾಸ ಕಲ್ಪನೆಯೊ ಚಿನ್ನ
ಪ್ರೀತಿ ತೇರಿನಿಂದ ಏರಿಬಂದ ಚೆನ್ನ
ಬಿರುಗಾಳಿಯಂತೆ ಹೊತ್ತುಹೋದೆ ನನ್ನ
ಮುದ್ದು ಮುದ್ದು ಮುದ್ದು ಗಿಣಿಯೇ
ಕಣ್ಣಿನಲ್ಲೆ ಕೊಂದೆ ಇನಿಯೇ
ರಾಗ ತಾಳ ಸೇರಿದಂತೆ
ಇನಿಯಾ ಉಸಿರುಸಿರಾ ಸುಖಸಂಗಮ
ಜೀವ ವೀಣೆ ಮೀಟಿದಂತೆ
ಏಕೋ ಒಡಲೊಳಗೆ ಹೊಸ ಸಂಭ್ರಮ
ಎದೆ ಗುಡಿಯಲ್ಲಿ ನೀನು ನಿಲ್ಲುಬಾ
ಓ.. ಪ್ರಿಯತಮ
ಪ್ರೀತಿ ಮಲ್ಲಿಗೆಯ ಇಲ್ಲಿ ಚೆಲ್ಲುಬಾ
ಓ.. ಪ್ರಿಯತಮೆ
ಕಾಲ ಹೀಗೆ ತಾನು ನಿಂತು
ಹೋಗದೆ ಸ್ವರ್ಗ ಇಲ್ಲೆ ನೋಡೆಂದೆ
ಗುಂಗಲೀ ನಾ ತೇಲಿ ಹೋದೆ..
ಯಾವ ದೇವಶಿಲ್ಪಿ ಕಡೆದನೊ ನಿನ್ನ ಹೊ.. ಹೊ..
ಕವಿ ಕಾಳಿದಾಸ ಕಲ್ಪನೆಯೊ ಚಿನ್ನ
ಪ್ರೀತಿ ತೇರಿನಿಂದ ಏರಿಬಂದ ಚೆನ್ನ
ಬಿರುಗಾಳಿಯಂತೆ ಹೊತ್ತುಹೋದೆ ನನ್ನ
Watch YouTube video
0 Comments