Input license here

ಇತ್ತೀಚಿನ ಪೋಸ್ಟ್‌ಗಳು

ಎಲ್ಲಿ ಹೋಗಲೆ ಹೇಗೆ ಕಾಣಲೆ

 ಎಲ್ಲಿ ಹೋಗಲೆ ಹೇಗೆ ಕಾಣಲೆ
ನನ್ನ ಗಿರಿಧರನ
ನನ್ನ ಬೀಡಿಗೆ ತಾನೆ ಬಂದು
ಕಾದು ನಿಂತವನ
ಹೇಗೆ ಕಾಣದೆ ಹೋದೆನೆ
ಹೇಗೆ ತರಲವನ

ಈಗ ದಿನವು ದಾರಿಬದಿಗೆ
ನಿಂತು ಕಾಯುವೇನೆ
ಮತ್ತೆ ಬಾರದೆ ಸ್ವಾಮಿ ಎಂದು
ನಲುಗಿ ನೋಯುವೇನೆ

ತಾನೆ ಒಪ್ಪಿ ಬಂದ ಘಳಿಗೆ
ಹೇಗೆ ತಪ್ಪಿದೇನೆ
ಯಾವ ಮಾಯೆಗೆ ಬಿದ್ದು ನಾನೆ
ನಿದ್ದೆ ಹೋದೇನೆ

ಬಾರೊ ನನ್ನ ಗಿರಿಧರ
ಬಾರೊ ಇನ್ನೊಮ್ಮೆ
ಬಂದರೀ ಸಲ ಪ್ರೇಮದಲ್ಲಿ
ಬಿಗಿವೆ ನಿನ್ನನ್ನೆ

- ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ

Post a Comment

0 Comments