ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
ಬಾಡಿ ಹೋಗುವ ಮುನ್ನ... ಆ ಆ....
ಬಾಡಿ ಹೋಗುವ ಮುನ್ನ ಕೀಳುವವರಾರೆಂದು

ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
ಬಾಡಿ ಹೋಗುವ ಮುನ್ನ ಕೀಳುವವರಾರೆಂದು
ಕಾಡು ಮಲ್ಲಿಗೆ ಒಂದು...

ಅರಳಿ ನಿಂತರು ದೇವಾ, ನೆರಳಿನಲಿ ನಾನಿಲ್ಲ
ಅರಳಿ ನಿಂತರು ದೇವಾ, ನೆರಳಿನಲಿ ನಾನಿಲ್ಲ
ಪಸರಿಸುವ ಪರಿಮಳವ ಆಘ್ರಾಣಿಸುವವರಿಲ್ಲ

ಏಕೆನಿತೋ ಕಾಡಿನಲೀ....
ಏಕೆನಿತೋ ಕಾಡಿನಲಿ ಮುನಿದು ನಿಲ್ಲಿಸಿದೆ
ಏಕೆನಿತೋ ಕಾಡಿನಲಿ ಮುನಿದು ನಿಲ್ಲಿಸಿದೆ
ಯಾವ ಪಾಪಕೆ ನನ್ನ ಇಂದು ಎಸೆದೆ

ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
ಬಾಡಿ ಹೋಗುವ ಮುನ್ನ ಕೀಳುವವರಾರೆಂದು
ಕಾಡು ಮಲ್ಲಿಗೆ ಒಂದು...

ಅಡಿಯ ಸೇರುವ ಭಾಗ್ಯ ಪಡೆದು ಬರಲಿಲ್ಲ
ಮುಡಿಯನೇರುವ ದಾರಿ ನಾ ಕಾಣಲಿಲ್ಲ
ಕನವರಿಸಿ ಕೇಳುತಿಹೆ.....
ಪ ದ ಸ ರಿ ಗಾ ರಿ ....
ಕನವರಿಸಿ ಕೇಳುತಿಹೆ ಕರುಣೆ ತೋರೆಂದು
ಕನವರಿಸಿ ಕೇಳುತಿಹೆ ಕರುಣೆ ತೋರೆಂದು
ಮುಡಿವ ಮಲ್ಲಿಗೆಯಾಗಿ ಬಾಳಬೇಕೆಂದು
ಮುಡಿವ ಮಲ್ಲಿಗೆಯಾಗಿ ಬಾಳಬೇಕೆಂದು

ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
ಬಾಡಿ ಹೋಗುವ ಮುನ್ನ
ಬಾಡಿ ಹೋಗುವ ಮುನ್ನ
ಬಾಡಿ ಹೋಗುವ ಮುನ್ನಾ...... ಕೀಳುವವರಾರೆಂದು

-ನಿಡಂಬೂರ ವ್ಯಾಸರಾಯ ಬಲ್ಲಾಳ