ಪಡುವಣ ಕಡಲಿನ ನೀಳಿಯ ಬಣ್ಣ
ಮುಡಿಯೊಳು ಸಂಜೆಯ ಅಂಚಿನ ಚಿನ್ನ
ಪಡುವಣ ಕಡಲಿನ ನೀಳಿಯ ಬಣ್ಣ
ಮುಡಿಯೊಳು ಸಂಜೆಯ ಅಂಚಿನ ಚಿನ್ನ
ಹೊಳೆಗಳ ಸೆರಗಿನ ಪಚ್ಚೆಯ ಬಯಲು
ಬರುಮಳೆಗoಜದ ಬೆಟ್ಟದ ಸಾಲು
ಹೊಳೆಗಳ ಸೆರಗಿನ ಪಚ್ಚೆಯ ಬಯಲು
ಬರುಮಳೆಗoಜದ ಬೆಟ್ಟದ ಸಾಲು
ಹುಲಿ ಕಾಡಾನೆಗಳಲೆಯುವ ಕಾಡಿದು
ಸಿರಿಗನ್ನಡ ನಾಡು
ಸಿರಿಗನ್ನಡ ನಾಡು
ಕಲ್ಲಿಗೆ ಬಯಸಿದ ರೂಪವ ತೊಡಿಸಿ
ಮುಗಿಲಿಗೆ ತಾಗುವ ಮೂರ್ತಿಯ ನಿಲ್ಲಿಸಿ
ಕಲ್ಲಿಗೆ ಬಯಸಿದ ರೂಪವ ತೊಡಿಸಿ
ಮುಗಿಲಿಗೆ ತಾಗುವ ಮೂರ್ತಿಯ ನಿಲ್ಲಿಸಿ
ದಾನ ಧರ್ಮಗಳ ಕೊಡುಗೈಯಾಗಿ
ವೀರಾಗ್ರಣಿಗಳ ತೊಟ್ಟಿಲ ತೂಗಿ
ಚಂದನಗಂಪಿನ
ಸಿರಿಗನ್ನಡ ನಾಡು
ಸಿರಿಗನ್ನಡ ನಾಡು
ಇಲ್ಲಿ ಅರಳಿದಿಹ ಹೂವುಗಳಿಲ್ಲ
ಹಾಡಲು ಬಾರದ ಹಕ್ಕಿಗಳಿಲ್ಲ
ಇಲ್ಲಿ ಅರಳಿದಿಹ ಹೂವುಗಳಿಲ್ಲ
ಹಾಡಲು ಬಾರದ ಹಕ್ಕಿಗಳಿಲ್ಲ
ಸಾವಿರ ದೀಪದ ಅರಮನೆಯೊಳಗೆ
ಶರಣೆನ್ನುವ ನೀ ವೀಣಾಖಣಿಗೆ
ಶರಣೆನ್ನುವ ನೀ ವೀಣಾಖಣಿಗೆ
ಸಿರಿಗನ್ನಡ ನಾಡು
ಮಿಂಚಿನ ಕಂಗಳ
ಸಿರಿಗನ್ನಡ ನಾಡು
ಸಿರಿಗನ್ನಡ ನಾಡು
ಪಡುವಣ ಕಡಲಿನ ನೀಳಿಯ ಬಣ್ಣ
ಮುಡಿಯೊಳು ಸಂಜೆಯ ಅಂಚಿನ ಚಿನ್ನ
ಹೊಳೆಗಳ ಸೆರಗಿನ ಪಚ್ಚೆಯ ಬಯಲು
ಬರುಮಳೆಗoಜದ ಬೆಟ್ಟದ ಸಾಲು
ಹೊಳೆಗಳ ಸೆರಗಿನ ಪಚ್ಚೆಯ ಬಯಲು
ಬರುಮಳೆಗoಜದ ಬೆಟ್ಟದ ಸಾಲು
ಹುಲಿ ಕಾಡಾನೆಗಳಲೆಯುವ ಕಾಡಿದು
ಸಿರಿಗನ್ನಡ ನಾಡು
ಸಿರಿಗನ್ನಡ ನಾಡು
- ಕೆ. ಎಸ್. ನರಸಿಂಹಸ್ವಾಮಿಯವರು.
0 Comments