ಮೊದಲು ಮೇಲಿನ ಸಂಖ್ಯೆಗಳಲ್ಲಿ ಒಂದು ಸಂಖ್ಯೆಯನ್ನು ತೆಗೆದುಕೋಳ್ಳಿ
ಉದಾಹಾರಣೆಗೆ: 35
ಈಗ ಸಾಮಾನ್ಯವಿಧಾನದಲ್ಲಿ 35 ರ ವರ್ಗವನ್ನ ಕಂಡುಹಿಡಿಯೋಣ
35 ರ ವರ್ಗ =352
= 35 X 35
= 1225
35 ರ ವರ್ಗ =352
ಹಂತ 1: 35 ನ್ನು ಒಂದು ಉದ್ದ ಗೆರೆಯ ಮೂಲಕ ಬೇರೆ ಮಾಡಿ
3 | 5
ಹಂತ 2 : 3 ರಕ್ಕೆ ಅದರ ಮುಂದಿನ ಸಂಖ್ಯೆ 4 ರಿಂದ ಗುಣಿಸಿ, ಹಾಗೇ 5 ಕ್ಕೆ 5ರಿಂದ ಗುಣಿಸಿ
4 X 3 | 5 X 5
12 | 25
ಹಂತ 3 : ಬಂದ ಗುಣಲಬ್ಧವನ್ನ ಒಟ್ಟಾಗಿ ಬರೆಯಿರಿ
1225
1225, 35 ರ ವರ್ಗವಾಗಿದೆ.
ಈ ರೀತಿ ವೇಗವಾಗಿ ಬಿಡಿ ಸ್ಥಾನದಲ್ಲಿ ಐದು ಇರುವ ಎರಡು ಅಂಕಿಗಳ ವರ್ಗ ಕಂಡುಹಿಡಿಯುವುದು.
ಕೆಳಗಿನ ಉದಾಹಾರಣೆಗಳನ್ನ ಗಮನಿಸಿ
1. 65 ರ ವರ್ಗವನ್ನ ಕಂಡುಹಿಡಿಯಿರಿ
ಹಂತ 1 :
6 | 5
ಹಂತ 2 :
7 X 6 | 5 X 5
42 | 25
ಹಂತ 3 :
4225
4225, 65 ರ ವರ್ಗವಾಗಿದೆ
2. 85 ರ ವರ್ಗವನ್ನ ಕಂಡುಹಿಡಿಯಿರಿ
ಹಂತ 1 :
8 | 5
ಹಂತ 2 :
9 X 8 | 5 X 5
72 | 25
ಹಂತ 3 :
7225
7225, 85 ರ ವರ್ಗವಾಗಿದೆ

0 Comments