ಓ..ಓ..ಓ..ಹೊಯ್ ಓ..ಓ..ಓ..ಓ
ಓಬೇಲಿಲೇಸೊ ಓಬೇಲಿಲೇಸೊ ಓಬೇಲಿಲೇಸೊ
ಹಗಲು ಹರಿಯಿತು
ಮುಗಿಲು ಕರೆಯಿತು
ಏಳು ಪಯಣಿಗ ಎಚ್ಚರ
ಗಾಳಿ ಬೀಸಿತು
ಅಲೆಯು ತೂಗಿತು
ದೋಣಿ ಸಾಗಿತು ದೂರಕೆ
ಓ..ಓ..ಓ ಓಬೇಲಿಲೇಸೊ
ಓ..ಓ ಓಬೇಲಿಲೇಸೊ ಓಬೇಲಿಲೇಸೊ
ಓ..ಓ ಓಬೇಲಿಲೇಸೊ ಓಬೇಲಿಲೇಸೊ
ಓಬೇಲಿಲೇಸೊ ಓಬೇಲಿಲೇಸೊ
ಅಲೆಯ ಒಡನೆ
ಸರಸ ಬೇಡ
ಬಲ್ಲೆನೆಂಬ ಬಿಂಕ ಬೇಡ ... ೨
ಮರೆತು ನಡೆಯ
ಮರೆತು ನಡೆಯ
ಮದ ಮತ್ಸರ ಮೋಹ ಸ್ವಾರ್ಥ
ಸುಳಿ ಸುತ್ತುವ ಚಕ್ರತೀರ್ಥ
ಪಾತಾಳಕೆ ಸೆಳೆದೊಯ್ಯುವ
ಅಲೆಯ ಬಲೆಯ ಬೀಸಿದೆ ... ೨
ಹಾವಿನವೊಲು ಸಾವು ನೀರ
ಬಾಯ ತೆರೆದಿದೆ
ಇದೆ ಚಕ್ರತೀರ್ಥ
ಇದೆ ಚಕ್ರತೀರ್ಥ
ಇದೆ ಚಕ್ರತೀರ್ಥ
-ತ.ರಾ.ಸು
0 Comments