ಏಕೆ ಹೀಗೆ
ನಮ್ಮ ನಡುವೆ
ಮಾತು ಬೆಳೆದಿದೆ ?
ಕುರುಡು ಹಮ್ಮು
ಬೇಟೆಯಾಡಿ
ಪ್ರೀತಿ ನರಳಿದೆ ?
ಭೂಮಿ ಬಾಯ
ತೆರೆಯುತಿದೆ,
ಬಾನು ಬೆಂಕಿ
ಸುರಿಯುತಿದೆ,
ಧಾರೆ ಒಣಗಿ
ಚೀರುತಿದೆ
ಚಿಲುಮೆ ಎದೆಯಲಿ.
ಮುಗಿಲು ಬರುವ
ಕಾಯುತಿದೆ,
ಮಳೆಯ ಕನಸ
ನೇಯುತಿದೆ,
ನಿನ್ನ ಬಯಸಿ
ಬೇಯುತಿದೆ
ನನ್ನ ಹೃದಯವು.
- ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ.
0 Comments