ಕೃಷ್ಣಾ .......ಕೃಷ್ಣಾ .........ಕೃಷ್ಣ ಕೃಷ್ಣ.....ಕೃಷ್ಣ..
ನೀ ಸಿಗದೇ ಬಾಳೊಂದು ಬಾಳೆ ಕೃಷ್ಣ
ನಾ ತಾಳಲಾರೆ ಈ ವಿರಹ ಕೃಷ್ಣ
ಕಮಲವಿಲ್ಲದ ಕೆರೆ ನನ್ನ ಬಾಳು
ಚಂದ್ರ ಇಲ್ಲದ ರಾತ್ರಿ ಬೀಳು
ನೀ ಸಿಗದೇ ಉರಿ ಉರಿ ಕಳೆದೆ ಇರುಳ
ಮಾತಿಲ್ಲ ಬಿಗಿತಿದೆ ದುಃಖ ಕೊರಳ
ಅನ್ನ ಸೇರದು ನಿದ್ದೆ ಬನ್ದೂದೆನ್ದು
ಕೂಡಿವೆ ಒಂದೇ ಸಮ ಕೃಷ್ಣ ಎಂದು
ಯಾರು ಅರಿವರು ಹೇಳು ನನ್ನ ನೋವ
ತಲ್ಲಣಿಸಿ ಕೂಗುತಿದೆ ದಾಸಿ ಜೀವ
ಒಳಗಿರುವ ಗಿರಿಧರನೇ ಹೊರಗೆ ಬಾರೋ
ಕಣ್ಣೆದುರು ನಿಂತು ಆ ರೂಪ ತೋರೋ
ಜನುಮ ಜನುಮದ ರಾಗ ನನ್ನ ಪ್ರೀತಿ
ಕೃಷ್ಣ .... ಕೃಷ್ಣ ........ಕೃಷ್ಣ ಕೃಷ್ಣ ಕೃಷ್ಣ
ನಿನ್ನೊಳಗೆ ಹರಿವುದೇ ಅದರ ರೀತಿ
- ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ

0 Comments