ನನ್ನೊಳಗೆ ಅಡಗಿ ಕೂತ
ನಿನ್ನ ಹೇಗೆ ತಿಳಿಯಲಿ
ಕಾಣದೆಯೆ ಆಡಿಸುವನ
ಹೇಗೆ ನಾನು ಕಾಣಲಿ
ನಾನು ಅವನು ಎಂಬ
ಬೇಧ ಅರಿವು ಬೆಳೆವ ತನಕ
ನೀರು ಆವಿಗಿರುವಂತೆ
ಮಳೆಯಾಗುವ ತನಕ
ಹಾಲೆ ಬೇರೆ ನೊರೆಯೆ ಬೇರೆ
ಕಾವಾರುವವರೆಗೆ
ತೃಣವೆರಡು ಬೇರೆ ಬೇರೆ
ಉರಿತಾಗುವವರೆಗೆ
ಬೀಜದಿಂದ ಎದ್ದ ಹಣ್ಣು
ಬೀಜವನ್ನೆ ತಾಳಿದೆ
ಹೆತ್ತ ಮೂಲವನ್ನು ತನ್ನ
ಮೈಯೊಳಗೆ ಪಡೆದಿದೆ
-ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ

0 Comments