ಯಾರು ಏನೆ ಜರಿಯಲಿ
ಯಾವ ಹೆಸರೆ ಕರಿಯಲಿ
ತಾಳಿ ನಿಲ್ಲು ಜೀವವೆ
ಸಹನೆಗೆಲ್ಲಲೀ
ಆಡಲೆಂದೆ ಕೆಲವರು
ಕಾಡಲೆಂದೆ ಕೆಲವರು
ತಾಳಿರುವರು ಬಾಳನು
ನೋಯಲೆಂದೆ ಕೆಲವರು
ಕಿಡಿ ಮಾತನು ಕಾರಿ
ಹಿಡಿ ಧೂಳನು ತೂರಿ
ಕದ ಬಡಿದರು ಕಂಗೆಡದಿರು
ಜೀವದಾಗೃತಿ ತೀರಿ
ತಾಳಿದವರೆ ಗೆಲುವರು
ಆಳಗಳಿಗೆ ಇಳಿವರು
ನೋವು ಕಡೆದ ಮೆಟ್ಟಿಲೇರಿ
ಶಿಖರಗಳಲಿ ಹೊಳೆವರು
-ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ

0 Comments