ಚೆಲ್ವಿ ಚೆಲ್ವಿ ಎಂದು ಅತಿಯಾಸೆ ಪಡಬೇಡ
ಚೆಲುವಿದ್ದರೇನೂ ಗುಣವಿಲ್ಲ | ಕೊಳೆನೀರು
ತಿಳಿಯಿದ್ದರೇನೂ ರುಚಿಯಿಲ್ಲ ||
ಕಪ್ಪುಹೆಂಡತಿ ಎಂದು ಕಳವಾಳ ಪಡಬೇಡ
ನೇರಾಳೆ ಹಣ್ಣು ಬಲುಕಪ್ಪು | ಆದಾರು
ತಿಂದು ನೋಡಿದರೆ, ರುಚಿ ಬಹಳ ||
ಬಂಗಾರದ ಬಳೆತೊಟ್ಟು ಬಡವಾರ ಬೈಬೇಡ
ಬಂಗಾರ ನಿನಗೇ ಸ್ಥರವಲ್ಲ | ಮಧ್ಯಾಹ್ನ
ಸಂಚೆಯಾಗುವುದೂ ತಡವಲ್ಲ ||ಚೆ||
0 Comments