Input license here

ಇತ್ತೀಚಿನ ಪೋಸ್ಟ್‌ಗಳು

ಹಸಿಯಿದ್ದಳು ಬಿಸಿಯಾದಳು

 

ಹಸಿಯಿದ್ದಳು ಬಿಸಿಯಾದಳು
ಸಸಿ ಇದ್ದ ಹುಡುಗಿ
ಹುಸಿ ಅರಿಯದ ಹುಡುಗಿ
ತನ್ನಿದಿರಲೆ ಬೆಳೆದಳು
ಹೊಸ ದೇಸಿಯ಼ ಬೆಡಗಿ

ಸಸಿಯಿದ್ದಳು಼ ಚಿಗುರಿದ್ದಳು
ಉಗುರ್ಗೆಂಪಿನ ಹುಡುಗಿ
ತುಟಿ಼ ಸೊಂಪಿನ಼ ಹುಡುಗಿ
ಆಡುತ ನೋಡುತ ಬಿಟ್ಟಳು
ಊರೆಲ್ಲವನುಡುಗಿ

ಚಿಗುರಿದ್ದಳು ಚಿಗರೆಯ ಮರಿ
ಹೂ ಬಿಟ್ಟಳು ಹುಡುಗಿ
ಮೊಗ್ಗಿದಾ ಹುಡುಗಿ
ಕಣ್ಣ್ ಕುಣಿತಕೆ
ನಗೆ ದನಿತಕೆ಼
ಮನೆ ಹೋಯಿತು ನಡುಗಿ

ಆಹಾ ಎನ್ನುತ ಬೆಳೆದಳು
ಹೂ ಸಿಂಪ್ಸಿದ ಹುಡುಗಿ
ವಧುವಾದಳು ಹುಡುಗಿ
ಒಗರಿಳಿದಿತು ಹುಳಿ ಇಳಿದಿತು
ಬೆಡಗುಳಿದಿತು ಅಡಗಿ

ಆ ತಾಪವೊ ಆ ಪಾಡೊ
ತಾಯಾದಳು ಹುಡುಗಿ
ಹಾಯಾದಳು ಹುಡುಗಿ
ಪಡೆದಷ್ಟು ಹಿಗ್ಗವಳಿಗೆ
ಮಮತೆಯ ಕಂಪಿಡುಗಿ

ಕಾಡಾದಳು಼ ಹಣ್ಣಾದಳು
ಮಣ್ಣಾದಳು ಹುಡುಗಿ
ನೆನಪಾದಳು ಹುಡುಗಿ
ವ್ಯಥೆಯಾದಳು ಕಥೆಯಾದಳು
ಎದೆಯಲ್ಲಿಯ ಮಡದಿ

-ದ ರಾ ಬೇಂದ್ರೆ

Post a Comment

0 Comments