ಎಲ್ಲೋ ದೂರದಿ ಜಿನುಗುವ ಹನಿಗಳೆ
ಬನ್ನಿ ಬನ್ನಿ ಬಿರುಮಳೆಯಾಗಿ
ಎಲ್ಲೋ ದೂರದಿ ಜಿನುಗುವ ಹನಿಗಳೆ
ಬನ್ನಿ ಬನ್ನಿ ಬಿರುಮಳೆಯಾಗಿ
ತುಂಬಲಿ ತುಳುಕಲಿ ಬತ್ತಿದ ಹೊಳೆಕೆರೆ
ಹೊಸ ಹಸಿತರೇಳಲಿ ನವುರಾಗಿ
ತುಂಬಲಿ ತುಳುಕಲಿ ಬತ್ತಿದ ಹೊಳೆಕೆರೆ
ಹೊಸ ಹಸಿತರೇಳಲಿ ನವುರಾಗಿ !!ಎಲ್ಲೋ ದೂರದಿ!!
ಎಲ್ಲೋ ದೂರದಿ ಜಿನುಗುವ ದನಿಗಳೆ
ಬನ್ನಿ ಬನ್ನಿ ರಸಗೀತೆಗಳಾಗಿ
ಮೌನದಿ ಮಲಗಿದ ವಾದ್ಯವೃಂದಗಳ
ಮೌನದಿ ಮಲಗಿದ ವಾದ್ಯವೃಂದಗಳ
ಮೇಲಾಡಿರಿ ಮಿದು ಬೆರಗಾಗಿ !!ಎಲ್ಲೋ ದೂರದಿ!!
ಎಲ್ಲೋ ದೂರದಿ ಮಿನುಗುವ ಕಿಡಿಗಳು
ಬನ್ನಿ ಬನ್ನಿ ಹೊಂಗೊಗರಾಗಿ
ಎಲ್ಲೋ ದೂರದಿ ಮಿನುಗುವ ಕಿಡಿಗಳು
ಬನ್ನಿ ಬನ್ನಿ ಹೊಂಗೊಗರಾಗಿ
ಹಣತೆ ಹಣತೆಗಳ ತುಟಿಯೊಳ ಕುಡಿನಗೆ
ಮಿಂಚಿಸೆ ಒಳಹೊರಗನು ಬೆಳಗಿ !!ಎಲ್ಲೋ ದೂರದಿ!!
ಎಲ್ಲೋ ದೂರದಿ ಚಿಕ್ಕೆ ಗೆಜ್ಜೆಗಳ
ಕಟ್ಟಿ ನರ್ತಿಸುವ ಹೆಜ್ಜೆಗಳ
ಎಲ್ಲೋ ದೂರದಿ ಚಿಕ್ಕೆ ಗೆಜ್ಜೆಗಳೆ
ಕಟ್ಟಿ ನರ್ತಿಸುವ ಹೆಜ್ಜೆಗಳ
ಬನ್ನಿ ನನ್ನೆದೆಗೆ ಲಾಸ್ಯವನಾಡಿರಿ
ಬನ್ನಿ ನನ್ನೆದೆಗೆ ಲಾಸ್ಯವನಾಡಿರಿ
ಚಿಮ್ಮಲಿ ನಲಿವಿನ ಬುಗ್ಗೆಗಳೆ
ಎಲ್ಲೋ ದೂರದಿ ಜಿನುಗುವ ಹನಿಗಳೆ
ಬನ್ನಿ ಬನ್ನಿ ಬಿರುಮಳೆಯಾಗಿ
ಎಲ್ಲೋ ದೂರದಿ ಜಿನುಗುವ ಹನಿಗಳೆ
ಬನ್ನಿ ಬನ್ನಿ ಬಿರುಮಳೆಯಾಗಿ
ತುಂಬಲಿ ತುಳುಕಲಿ ಬತ್ತಿದ ಹೊಳೆಕೆರೆ
ಹೊಸ ಹಸಿತರೇಳಲಿ ನವುರಾಗಿ
ತುಂಬಲಿ ತುಳುಕಲಿ ಬತ್ತಿದ ಹೊಳೆಕೆರೆ
ಹೊಸ ಹಸಿತರೇಳಲಿ ನವುರಾಗಿ
-ಜಿ. ಎಸ್. ಶಿವರುದ್ರಪ್ಪ
0 Comments