Input license here

ಇತ್ತೀಚಿನ ಪೋಸ್ಟ್‌ಗಳು

ನಿನ್ನದೆ ನೆಲ

 ನಿನ್ನದೆ ನೆಲ
ನಿನ್ನದೆ ಜಲ
ನಿನ್ನದೆ ಆಕಾಶ
ಕಿಂಚಿತ್ತು ಅನುಮಾನಕೆ
ಇಲ್ಲವೊ ಅವಕಾಶ

ಈ ನದಿಗಳು ಶತಮಾನವು
ಬೆಳೆದ ಕನಸು ನಿನ್ನದೆ
ಈ ಜನತೆಯು ಬೆವರು
ಸುರಿಸಿ ದುಡಿದ
ನನಸು ನಿನ್ನದೆ

ಗಡಿಯುದ್ದಕ್ಕು ಸಿಡಿಗುಂಡಿಗೆ
ಒಡ್ಡಿದ ಎದೆ ನಿನ್ನದೆ
ಹಿಮಾಲಯದ ಶಾಂತಿಯಲ್ಲಿ
ಎತ್ತಿದ ತಲೆ ನಿನ್ನದೆ

ನೂರಾಸೆಯ ಹೆಗಲೇರಿಸಿ
ನಡೆದ ದಾರಿ ನಿನ್ನದೆ
ಬರುವ ದಿನದ ಭರವಸೆಗಳ
ಬೆಳೆವ ಹೊಣೆಯು ನಿನ್ನದೆ

-ಜಿ. ಎಸ್. ಶಿವರುದ್ರಪ್ಪ

Post a Comment

0 Comments