ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ
ಜೊತೆ ನೀನಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ|| ಪ ||
ಕಣ್ಣನೆ ದಣಿಸುವ ಈ ಪಡುವಣಬಾದಮ್ನಗಳು
ಮಣ್ಣನೆ ಹೊಮ್ಮಿನ ಹಣ್ಣಾಗಿಸೊ ಈ ಕಿರಣಗಳು
ಹಚ್ಚನೆ ಹಸುರಿಗೆ ಹಸೆಯಿಡುತಿರೊ ಈ ಖಗಗಾನ
ಚಿನ್ನ ನೀನಿಲ್ಲದೆ ಬಿಮ್ಮೆನ್ನುತ್ತಿದೆ ರಮ್ಯೋದ್ಯಾನ
|| ಪ ||
ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ
ಬರುವೆಯೋ ಬಾರೆಯೋ ನೀನೆತ್ತುತಿದೆ ಸಂದೇಹ
ಮುತ್ತಿನಾಲಸ್ಯವ ಬಿಡಿಮೌನವ ಹೊಡೆದೋಡಿಸು ಬಾ
ಮತ್ತೆ ಆ ಸವತೆಯ ಹಿರಿಬೇಲಿಯ ಸರಿ ನಿಲ್ಲಿಸು ಬಾ
-ಕೆ.ಎಸ್.ನಿಸಾರ್ ಅಹಮದ್
0 Comments