ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ
ಬೆಣ್ಣೆಯ ಕದ್ದು ಜಾರುತ ಬಿದ್ದು ಮೊಣ ಕಾಲೂದಿಸಿಕೊಂಡನಮ್ಮ
ಬಿಂದಿಗೆ ಬಿದ್ದು ಸಿಡಿಯಲು ಸದ್ದು ಬೆಚ್ಚಿದ ಗೋಪಿಯ ಕಂದನಮ್ಮ||ಬೆಣ್ಣೆ||
ತಾಯಿ ಬಂದಳೋಡಿ, ಕಳ್ಳನ ಕಣ್ಣಿನಲ್ಲಿ ಖೋಡಿ
ಕಣ್ಣಲಿ ತಾಯಿ ಸಿಟ್ಟನು ತಳೆದು ಸೊಂಟಕೆ ಕೈಯಿಟ್ಟು
ಆದಳು ಅರೆ ಕ್ಷಣ ಭೀಕರ ಕಾಳಿ ದುರು ದುರು ಕಣ್ಬಿಟ್ಟು||ಬೆಣ್ಣೆ||
ಹಣೆ ತುಟಿ ಕೆನ್ನೆಗೆ ಬೆಣ್ಣೆ ಮೆತ್ತಿದ ಒರಟನ ನೋಟಕ್ಕೆ
ಇಳಿಯಿತು ಕೋಪ ಅರಳಿತು ಕೆಂದುಟಿ ತುಂಟನ ಆಟಕ್ಕೆ
ತಪ್ಪಿದ ದಂಡಕೆ ನಿಟ್ಟುಸಿರೆಳೆದ ಬೆಣ್ಣೆಗಳ್ಳ ನೀಲ
ತಟ್ಟನೆ ಅಳುವುದ ನಿಲ್ಲಿಸಿ ನಕ್ಕ ಬಾಯಗಲಿಸಿ ಬಾಲ
ಅರಳಿದ ಬೆಳದಿಂಗಳ ಜಾಲ|
ಅವನ ಅಕುಟಿಲ ಬೆಣ್ಣೆಯಂತ ನಗು ಕಾಯಲಿ ಜಗದವರ
ಸಂತತ ನಗಿಸಲಿ ನಗದವರ||ಬೆಣ್ಣೆ||
-ಕೆ.ಎಸ್.ನಿಸಾರ್ ಅಹಮದ್
0 Comments