Input license here

ಇತ್ತೀಚಿನ ಪೋಸ್ಟ್‌ಗಳು

ಮರೆಯದಿರು ಮರೆಯದಿರು ಮರುಳು ಮನುಜ - ಕನಕದಾಸರ ಕೀರ್ತನೆ

ಮರೆಯದಿರು ಮರೆಯದಿರು ಮರುಳು ಮನುಜ
ನಾರಾಯಣನ ಸ್ಮರಣೆಯನು ಮಾಡು ಮನುಜ

ರಂಗನಾಥನು ಇರಲು ಜಂಗುಳಿ ದೈವಗಳೇಕೆ
ತುಂಗಭದ್ರೆ ಇರಲಿಕ್ಕೆ ಬಾವಿ ಕೆರೆ ಏಕೆ
ಅಂಗನೆ ಸತಿ ಇರಲು ಮಡಗು ಹೆಣ್ಣುಗಳೇಕೆ
ಮಂಗಳಾತ್ಮನಿರಲಿಕ್ಕೆ ಅನ್ಯ ದೈವವೇಕೆ

ಹಾಲು ಹಳ್ಳವಿರಲಿಕ್ಕೆ ವಾಳಿಯವ್ತರ್ನೇಕೆ
ಮೇಲು ನಾಮವಿರಲಿಕ್ಕೆ ಕಟಕು ಇನ್ನೇಕೆ
ಬಾಲ ಹನುಮನಿರಲಿಕ್ಕೆ ಹುಲ್ಲು ಕಪಿಗಳು ಏಕೆ
ಮೇಲಾದ ತುಳಸಿ ಇರೆ ಕಗ್ಗೊರಲೆ ಏಕೆ

ಚಿನ್ನದ ಗಿರಿ ಇರಲು ಕಬ್ಬಿಣದ ಮೊರಡಿ ಏಕೆ
ರನ್ನ ಮಾಣಿಕವಿರಲು ಗಾಜಿನ ಹರಳೇಕೆ
ಅನ್ನ ತುಪ್ಪವಿರಲಿಕ್ಕೆ ಮದ್ಯ ಪಾನಗಳೇಕೆ
ಚೆನ್ನಾದಿ ಕೇಶವನಿರೆ ಮಿನುಗು ದೈವಗಳೇಕೆ

Post a Comment

0 Comments