ನೋಡಿದ ಅವನು ಹೀಗೆ ನೋಡಿದ(೨)
ಒಣಬೇರಿಗೆ ನೀರೂರುವ ಹಾಗೆ ನೋಡಿದ
ಕೂಡಿದ ನನ್ನ ಹೇಗೆ ಕೂಡಿದ(೨)
ಹೊಸಚೇತನ ನನ್ನಲಿ ಹರಿವಂತೆ ಕೂಡಿದ
ನೋಡಿದ ಅವನು ಹೀಗೆ ನೋಡಿದ
ನರಳಿದೆ ಹ ಹೇಗೆ ನರಳಿದೆ
ಮೈಯ ತುಮ್ಬ ಚಿಗುರು ನಿಮಿರಿದಂತೆ ನರಳಿದೆ
ನರಳಿದೆ ಹಹ ಹೇಗೆ ನರಳಿದೆ
ಮೈಯ ತುಮ್ಬ ಚಿಗುರು ನಿಮಿರಿದಂತೆ ನರಳಿದೆ
ಅರಳಿದೆ ಹಿಗ್ಗಿ ಹೇಗೆ ಅರಳಿದೆ
ಹೂವಿನೋಕುಳಿಯಲಿ ಮಿನ್ದ ಹಾಗೆ ಅರಳಿದೆ (೨)
ನೋಡಿದ ಅವನು ಹೀಗೆ ನೋಡಿದ(೨)
ಒಣಬೇರಿಗೆ ನೀರೂರುವ ಹಾಗೆ ನೋಡಿದ
ನೋಡಿದ ಅವನು ಹೀಗೆ ನೋಡಿದ
ಸುರಿಸಿದ ಒಲವ ಹೇಗೆ ಸುರಿಸಿದ
ಆಗುಮ್ಬೆಯ ಹುಚ್ಚು ಮಳೆಯ ಹಾಗೆ ಸುರಿಸಿದ(೨)
ಫಲಿಸಿತು ನನ್ನೊಳಲೇನು ಫಲಿಸಿತು
ಝೊಮ್ಪಿ ಝೊಮ್ಪಿ ಹಣ್ಣ ತೂಗಿ ಜೀವ ಫಲಿಸಿತು(೨)
ನೋಡಿದ ಅವನು ಹೀಗೆ ನೋಡಿದ(೨)
ಒಣಬೇರಿಗೆ ನೀರೂರುವ ಹಾಗೆ ನೋಡಿದ
ನೋಡಿದ ಅವನು ಹೀಗೆ ನೋಡಿದ
ತುಮ್ಬಿತು ಎದೆಯೊಳಲೇನು ತುಂಬಿತು
ನೂರು ಹಕ್ಕಿ ಹೈಕಳುಗಳ ಹಾಡು ತುಂಬಿತು(೨)
ಆದೆನು ನಾನು ಏನಾದೆನು
ಸುತ್ತ ತಮ್ಪು ನೆರಳು ಹರಡಿ ಧನ್ಯಳಾದೆನು(೨)
ನೋಡಿದ ಅವನು ಹೀಗೆ ನೋಡಿದ(೨)
ಒಣಬೇರಿಗೆ ನೀರೂರುವ ಹಾಗೆ ನೋಡಿದ
ನೋಡಿದ ಅವನು ಹೀಗೆ ನೋಡಿದ
ನೋಡಿದ ಅವನು ಹೀಗೆ ನೋಡಿದ
- ಬಿ.ಆರ್.ಲಕ್ಷ್ಮಣ್ ರಾವ್
0 Comments