Input license here

ಇತ್ತೀಚಿನ ಪೋಸ್ಟ್‌ಗಳು

ಮುಗಿಲ ತುಂಬ ಬೇರ ಬಿಳಲ

 ಮುಗಿಲ ತುಂಬ ಬೇರ ಬಿಳಲ
ಆಲದ ಮರಾ..ಆ
ಆಳದೊಳಗ ಪಾತಾಳದೊಳಗ
ಹಬ್ಬಿ ಬೆಳೆದ ಚಿಗುರ ಹಂದರ

ಹಿಂದೆ ಹಿತ್ತಲ ಮುಂದಿನಂಗಳ
ನೆರಳ ವೈಭವಾ..ಆ
ಹಳೆಯ ಬಾವಿ ಕಳೆಯ ಬಾವಿ
ಒಳಗ ಹಸಿರು ಬಿಂಬ ಸಂಭವ

ನಗೆಯ ಸೋಗೆ ಎಳೆಯ ನಗೆಯ
ತುಳಕಿ ಹಾಡಿವೇ..ಏ
ರೆಕ್ಕೆ ಬಲಿಯದ ಬಲಿತ ಗಾಯದ
ಎಷ್ಟೊ ಹಕ್ಕಿ ಚೀರಿ ನರಳಿವೆ

ಮನೆಯ ಗೋಡೆ ಬಿರುಕಿನೊಳಗೆ
ಹಸಿರು ಒಡೆದಿದೆ ಆಹಾ..ಆ
ಬೆರಗಿನಲ್ಲಿ ಹೊರಗಿನಲ್ಲಿ
ಮುಗ್ಧ ಕೂಸು ಬಾಯಿ ತೆರೆದಿದೆ

-ಚಂದ್ರಶೇಖರ ಕಂಬಾರ

Post a Comment

0 Comments