ಗೆಳೆಯ ಬರತೀನಿ ಮನದಾಗಿಡೊ ನೆನಪ
ಹಾ.. ಗೆಳೆಯ ಬರತೀನಿ ಮನದಾಗಿಡೊ ನೆನಪ
ನಾ ನೀ ಯಾರೋ ಏನೋ ಎಂತೋ
ಅಂತು ತೋರಿಸಿತು ಕಾಣದ ತಂತು
ಇದು ಹೌದು ಹಾದಿ ಗೆಳೆತನ
ಇದ್ದರಿದ್ದೀತು ಹಳಿಯ ಬಗೆತನ
ಮರೆತು ನೆನಪಿಸಿದ್ ಹಾಂಗ
ಬೆಸೆದ ಓ ನಮ್ಮ ಮನ
ಕಡಿ ತನಕ ಸ್ನೇಹ ಬಂಧನ
ಹಾ.. ಗೆಳೆಯ ಬರತೀನಿ
ಗೆಳೆಯ ಬರತೀನಿ ಮನದಾಗಿಡೊ ನೆನಪ
ಹಾ.. ಗೆಳೆಯ ಬರತೀನಿ
ಹರಿ ನೀರು ಹರಿತೋ ಬೆಳವಲಕೆ
ಒಡ ಮುರಿದ್ ಹಾಂಗತೊ ಹಸಿರು ಎಡಬಲಕ
ನೆನೆ ಹಾಯ್ದು ನವಿರೆದ್ದು ತೂಗಿ
ತುಂಬಿ ಬಂದಿತು ಈ ವರುಷ ಸುಗ್ಗಿ
ತೋರಿ ಕೊಳ್ಳುದರೊಳಗೆ ಗಾಳಿ ಅಡಮುಳಿ ದಾಳಿ
ಕೈಗಿತ್ತು ಬಾಗಿಲ ಮಾಗಿ
ಹಾ.. ಗೆಳೆಯ ಬರತೀನಿ
ಗೆಳೆಯ ಬರತೀನಿ ಮನದಾಗಿಡೊ ನೆನಪ
ಹಾ.. ಗೆಳೆಯ ಬರತೀನಿ
ಮೈಯಾಗ ಬಂದ್ ಹಾಂಗ ಚೈತ್ರ
ಮೈತ್ರಿ ಕುಣಿಸಿತು ನಮ್ಮ ನಿಮ್ಮ ನಿರತ
ಒಸೆದುಸಿರು ಸುರಿದಿತ್ತು ಬಿಗಿತ
ಒಂಟಿ ಬಿಚ್ಚಿಲ್ಲ ಬರಿ ವ್ಯರ್ಥ ಎಡೆತ
ದಿನವೊಂದು ಕ್ಷಣದ್ ಹಾಂಗ
ದಿನವೆಲ್ಲ ದಾಂಗ ದಿಂಗ
ದಿನವೊಂದು ಕ್ಷಣದ್ ಹಾಂಗ
ದಿನವೆಲ್ಲ ದಾಂಗ ದಿಂಗ
ಹರೆ ಬಂತು ಪ್ರೀತಿಗ ತುರತ
ಹಾ.. ಗೆಳೆಯ ಬರತೀನಿ
ಗೆಳೆಯ ಬರತೀನಿ ಮನದಾಗಿಡೊ ನೆನಪ
ಹಾ.. ಗೆಳೆಯ ಬರತೀನಿ
-ಚಂದ್ರಶೇಖರ ಕಂಬಾರ
0 Comments