Input license here

ಇತ್ತೀಚಿನ ಪೋಸ್ಟ್‌ಗಳು

ಒಂದಾನೊಂದು ಕಾಲದಾಗ ಏಸೊಂದ ಮುದವಿತ್ತ

 ಒಂದಾನೊಂದು ಕಾಲದಾಗ ಏಸೊಂದ ಮುದವಿತ್ತ
ಏಸೊಂದ ಮುದವಿತ್ತ ಮುದಕೊಂದ ಹದವಿತ್ತ
ಅದಕ ಹಂಗಾ ಇತ್ತ ಅದಕೊಂದು ಶಿವನ ಅಂಕುಶವಿತ್ತ
ಒಂದಾನೊಂದು ಕಾಲದಾಗ

ಆಳದ ಹಳಗವಿ ಬೆಳಕನುಟ್ಟಾವೊ
ಹಾಳ ಬಾವಿಗು ಕಣ್ಣು ಬಂದಾವೊ
ಬೇಲಿಯ ಮೇಗೆ ನೀಲಿಯೆ ಹೂವು
ಬೀಳು ನೆಲದ ಏಗಿ ಕಳ್ಳ ಕರಗಿ ತೇಲಿ ಚಿಲ್ಲನೆ ಚಿಮ್ಮಿತ್ತ

ಒಂದಾನೊಂದು ಕಾಲದಾಗ ಏಸೊಂದ ಮುದವಿತ್ತಾ

ಸೀಮಿಯ ಕಲ್ಲಿಗೆ ಬೇಲಿಯ ಸಾಕ್ಷಿ
ಬೇಲಿ ಹೂವಿನಾಗ ಹನಿ ಹನಿ ಇಬ್ಬನಿ
ನಗತ ತಟಕತಾವ ಇಬ್ಬನಿ ಹನಿಗೆ
ಸಂಜೆ ಮುಂಜಾನೆ ಮಂಜು ಮೂದಿದಾರ ಮಂಜು ಕೆಂಪಾಗಿತ್ತಾ

ಒಂದಾನೊಂದು ಕಾಲದಾಗ ಏಸೊಂದ ಮುದವಿತ್ತಾ

ಕುರುಹು ಗೆಟ್ಟದಕ ಹೆಸರೇನ ಇಟ್ಟಿ
ಎಲ್ಲಿ ನೋಡಿದಲ್ಲಿ ವೀರದಲ್ಲ ಓಳಿ
ಹಸನು ಮಾದಿ ಹರಡಿದ್ದ ಹೊಲದಾಗ
ಬೊಗಸೇಲಿ ಬಿತ್ತಿ ತನಿಕೇಲೆ ಎಲಗಾರ
ಎಲುಬಿನ ಹೊಲ ರಾಶಿ

-ಚಂದ್ರಶೇಖರ ಕಂಬಾರ

Post a Comment

0 Comments