ಕಾಂತನಿಲ್ಲದ ಮ್ಯಾಲೆ ಏಕಾಂತ ಯಾತಕೆ
ಗಂಧ ಲೇಪನ ಯಾತಕೆ ಈ ದೇಹಕೆ
ಕಾಂತನಿಲ್ಲದ ಮ್ಯಾಲೆ ಏಕಾಂತ ಯಾತಕೆ
ಗಂಧ ಲೇಪನ ಯಾತಕೆ ಈ ದೇಹಕೆ
ಮಂದಮಾರುತ ಮೈಗೆ ಬಿಸಿಯಾದರೆ ತಾಯೆ
ಬೆಳುದಿಂಗಳು ಉರಿವ ಬಿಸಿಯಾಯಿತೆ ನನಗೆ
ಹೂಜಾಜಿ ಸೂಜಿಯ ಹಾಗೆ ಚುಚ್ಚುತ
ಹೂಜಾಜಿ ಸೂಜಿಯ ಹಾಗೆ
ಕಾಂತನಿಲ್ಲದ ಮ್ಯಾಲೆ ಏಕಾಂತ ಯಾತಕೆ
ಗಂಧ ಲೇಪನ ಯಾತಕೆ ಈ ದೇಹಕೆ
ಉರಿಗಳು ಮೂಡ್ಯಾವು ನಿಡುಸೋಯ್ಲಿನೊಳಗೆ
ಉಸಿರಿನ ಬಿಸಿ ಅವಗೆ ತಾಗದೆ ಹುಸಿಹೋಯ್ತೆ
ಚೆಲುವ ಬಾರದೆ ಏನು ಫಲವೇ
ಚೆಲುವ ಬಾರದೆ ಏನು
ಕಾಂತನಿಲ್ಲದ ಮ್ಯಾಲೆ ಏಕಾಂತ ಯಾತಕೆ
ಗಂಧ ಲೇಪನ ಯಾತಕೆ ಈ ದೇಹಕೆ
ಕಾಮನಾ ಬಾಣ ಹತ್ತ್ಯಾವ ಬೆನ್ನ
ಆತುರ ತೀವ್ರ ಸಮಾತುರ ತಾಳೆ ನಾ
ಆರ್ತಳಿಗೆ ಆಶ್ರಯವಿರದೆ ಒದ್ದಾಡುವೆ
ಆರ್ತಳಿಗೆ ಆಶ್ರಯವಿರದೆ
ಕಾಂತನಿಲ್ಲದ ಮ್ಯಾಲೆ ಏಕಾಂತ ಯಾತಕೆ
ಗಂಧ ಲೇಪನ ಯಾತಕೆ ಈ ದೇಹಕೆ
ಅನ್ಯಪುರುಷನು ಮಾರ ಅಂಗನೆಯ ಎಳೆದೆರೆ
ಕೈ ಹಿಡಿದ ಸರಿ ಪುರುಷ ಸುಮ್ಮನಿರುತಾನೆ
ಕರುಣೆಯ ತೋರುವರ್ಯಾರೆ ಸಣ್ಣವಳಿಗೆ
ಕರುಣೆಯ ತೋರುವರ್ಯಾರೆ
ಕಾಂತನಿಲ್ಲದ ಮ್ಯಾಲೆ ಏಕಾಂತ ಯಾತಕೆ
ಗಂಧ ಲೇಪನ ಯಾತಕೆ ಈ ದೇಹಕೆ
ಗಂಧ ಲೇಪನ ಯಾತಕೆ ಈ ದೇಹಕೆ
-ಚಂದ್ರಶೇಖರ ಕಂಬಾರ
0 Comments