ಇಲ್ಲಿ ನನ್ನ ನಿನ್ನ ನಡುವೆ ಎಂಥ ಕಡಲು ನಿಂತಿದೆ, ಅದೆಂಥ ಕಡಲು ನಿಂತಿದೆ; ಅಂತವಿಲ್ಲ ಪಾರವಿಲ್ಲದಂತೆ ನಿಡಿದು ನಿಂತಿದೆ, ಅಯ್ಯೋ, ನಿಡಿದು ನಿಂತಿದೆ ! ಅದನು ದಾಟಿ ಬರಲು ಬಂದ ಬಾಳು ಸಾಲದಂತಿದೆ, ಅಯ್ಯೋ, ಸಾಲದಂತಿದೆ !
ನನ್ನದಿಲ್ಲಿ ಈ ತೀರ, ನಿನ್ನದದೋ ಆ ತೀರ; ಅದರ ನಡುವೆ ಮೊರೆವ ತೆರೆಗಳೋಳಿ ಎನಿತು ಘೋರಘೋರ ಭೋರೆಂದು ಕೂಗಿ ರೇಗಿ ಕಿವಿಯು ಕೊರೆಯುವೀ ಸಮೀರ ನನ್ನ ಕೂಗು ನಿನ್ನ ಕಿವಿಗೆ ಬೀಳದಂತೆ ಮಾಡಿದೆ-
ಅಯ್ಯೋ, ನನ್ನ ನಿನ್ನ ನಡುವೆ ಎಂಥ ಕಡಲು ಮೂಡಿದೆ, ಅದೆಂಥ ಕಡಲು ಮೂಡಿದೆ !
0 Comments