ಎದೆಯು ಮರಳಿ ತೊಳಲುತಿದೆ ದೊರೆಯದುದನೆ ಹುಡುಕುತಿದೆ ಅತ್ತ ಇತ್ತ ದಿಕ್ಕುಗೆಟ್ಟು ಬಳ್ಳಿ ಬಾಳು ಚಾಚುತಿದೆ ತನ್ನ ಕುಡಿಯನು ತನ್ನ ಕುಡಿಯನು ಎದೆಯು ಮರಳಿ ತೊಳಲುತಿದೆ ದೊರೆಯದುದನೆ ಹುಡುಕುತಿದೆ ಅತ್ತ ಇತ್ತ ದಿಕ್ಕುಗೆಟ್ಟು ಬಳ್ಳಿ ಬಾಳು ಚಾಚುತಿದೆ ತನ್ನ ಕುಡಿಯನು ತನ್ನ ಕುಡಿಯನು
ಸಿಗಲಾರದಾಸರಕೆ ಕಾದ ಕಾವ ಬೇಸರಕೆ ಸಿಗಲಾರದಾಸರಕೆ ಕಾದ ಕಾವ ಬೇಸರಕೆ ಮಿಡುಕಿ ದುಡುಕಲೆಣಿಸುತಿದೆ ಮಿಡುಕಿ ದುಡುಕಲೆಣಿಸುತಿದೆ ತನ್ನ ಗಡಿಯನು ತನ್ನ ಗಡಿಯನು ಎದೆಯು ಮರಳಿ ತೊಳಲುತಿದೆ
ಅದಕೂ ಇದಕೂ ಅoಗಲಾಚಿ ತನ್ನೊಲವಿಗೆ ತಾನೇ ನಾಚಿ ಅದಕೂ ಇದಕೂ ಅoಗಲಾಚಿ ತನ್ನೊಲವಿಗೆ ತಾನೇ ನಾಚಿ ದಡವ ಮುಟ್ಟಿ ಮುಟ್ಟದೊಲು ದಡವ ಮುಟ್ಟಿ ಮುಟ್ಟದೊಲು ಹಿಂದೆಗೆಯುವ ವೀಚಿ ವೀಚಿ ಮುರುಟತಲಿದೆ ಮನದಲಿ ಮುರುಟತಲಿದೆ ಮನದಲಿ ಎದೆಯು ಮರಳಿ ತೊಳಲುತಿದೆ
ನೀರದಗಳ ದೂರ ತೀರ ಕರೆಯುತಲಿದೆ ಎದೆಯ ನೀರ ನೀರದಗಳ ದೂರ ತೀರ ಕರೆಯುತಲಿದೆ ಎದೆಯ ನೀರ ಮೀರುತದಲಿ ಹೃದಯ ಭಾರ ಮೀರುತದಲಿ ಹೃದಯ ಭಾರ ತಾಳಲೆoತು ನಾ ತಾಳಲೆoತು ನಾ ಯಾವ ಬಲವೊ ಯಾವ ಒಲವೊ ಕಾಯಬೇಕು ಅದರ ಹೊಳವು ಯಾವ ಬಲವೊ ಯಾವ ಒಲವೊ ಕಾಯಬೇಕು ಅದರ ಹೊಳವು ಕಾಣದೆದಳ್ಳಿಸಲು ಮನವು ಕಾಣದೆದಳ್ಳಿಸಲು ಮನವು ಬಾಳಲೆoತು ನಾ ಬಾಳಲೆoತು ನಾ ಎದೆಯು ಮರಳಿ ತೊಳಲುತಿದೆ ದೊರೆಯದುದನೆ ಹುಡುಕುತಿದೆ ಅತ್ತ ಇತ್ತ ದಿಕ್ಕುಗೆಟ್ಟು ಬಳ್ಳಿ ಬಾಳು ಚಾಚುತಿದೆ ತನ್ನ ಕುಡಿಯನು ತನ್ನ ಕುಡಿಯನು
0 Comments