Input license here

ಇತ್ತೀಚಿನ ಪೋಸ್ಟ್‌ಗಳು

ನಾನಲ್ಲ ಬೇರೆ, ನೀವಲ್ಲ ಬೇರೆ

ನಾನಲ್ಲ ಬೇರೆ, ನೀವಲ್ಲ ಬೇರೆ-
ಬೇರೊಂದೆ; ಕೊಂಬೆ ಕೊಂಬೆ
ನೂರೊಂದು ಟೊಂಗೆರೆಂಬೆ;
ಗೆಲ್ಲು ಗೆಲ್ಲು ಎಲೆ ಎಲೆಯು ಚಂದ,
ಟಿಸಳು ಎಸಳು ಕುಡಿ ಮಿಡಿ ಬಿಸವಂದ;
ಒಂದೇ ಶೃತಿ, ನೂರೊಂದಿದೆ ಛಂದ:
ಇದು ಮೃದು, ಅದು ಅಹ, ಕಠೋರಬಂಧ-
ಮನುಕುಲ ಅಗಾಧ ಮಾಕಂದ;
ನಾನೊಂದು ಹೂವು ಸ್ವಚ್ಛಂದ !
ನಿಮ್ಮಿಂದ ನನ್ನ ಆನಂದ;
ನಿಮಗಾಗಿ ನನ್ನ ಈ ಗಂಧ.
ಬರುವಂತ ಹಣ್ಣಿಗಾಗಿ
ನಾವೆಲ್ಲ ನೋಂತು ಬೀಗಿ,
ಕಾಯೋಣ ಬಿಸಿಲು ಬೇಗೆ,
ಮೀಯೋಣ ಬೆಳ್ಳಿಮಳೆಗೆ-
-ನಾನಲ್ಲ ಬೇರೆ, ನೀವಲ್ಲ ಬೇರೆ !

-ಎಮ್. ಗೋಪಾಲಕೃಷ್ಣ ಅಡಿಗ

Post a Comment

0 Comments