ಕಾಮದ ಕೆಸರಿಂದ ಹುಟ್ಟಿ ಬಂತು ಎಂಥ ವಿಮಲವು, ಪ್ರೀತಿಯೆಂಬ ವಿಮಲವು !
ಗಾಳಿಯೊಡನೆ ಕೂಡಿಯಾಡಿ ಜೇನುಹಾಡುಗಳನು ಹಾಡಿ, ಗಾನದೆಲೆಯ ಕೆರಳಿಸಿ ದುಂಬಿದುಂಬಿಯೆದೆಯಲಿ; ಮೇಲೆ ಮತ್ತೆ ಬಾನಿನತ್ತ ನೋಡಿ ಕಮಲವಾಯ್ತು ಮತ್ತ; " ನನ್ನ ನಾಡು ಬಾನು ದಿಟ; ನನ್ನ ನೆಲೆಯೆ ಮುಗಿಲ ದಿಟ; ಸಾಕು ಕೆಸರು-ಕೊಳೆ-ಸಂಕಟ " ಎಂದು ಕುಣಿದುದುದು ಧಿಂಕಿಟ.
ಕುಣಿದು ಕುಣಿದು ಕೆಸರ ಬಿಟ್ಟು ಮೇಲೆ ಬಂತು ಕಮಲವು ! ಬಾಡಿ ಬಿಸಿಲಿನುರಿಗೆ ಸುಟ್ಟು ಬತ್ತಿಹೋಯ್ತು ಕಾಯವು. ಗಾಳಿ ಸರಸವಾಡಲಿಲ್ಲ; ದೂರಬಾನಿನುರಿವ ಕಣ್ಣು ತಂಪನೊಸೆದು ನೀಡಲಿಲ್ಲ ! ಗಂಧವಿಲ್ಲ, ಚಂದವಿಲ್ಲ, ಕಮಲ ಬರಿಯ ಕಾಷ್ಠವು. ಕೆಸರಿಲ್ಲದೆ ಕಮಲವುಂಟೆ ? ಎಂದುದಖಿಲಸೃಷ್ಠಿಯು !
0 Comments