ಇದನರಿತಂದೆ; ಆ ಅರಿವುಕಿರಣವನೆ ನುಂಗಿತೊಂದು ಮೇಘ; ಆ ಮುಗಿಲ ಬಸಿರನೇ ಬಗೆದು ಬಂತು ನವ ಕಿರಣವೊಂದಮೋಘ ! ಹಿಡಿದ ಹೊನ್ನೆ ಮಣ್ಣಹುದು ! ಮಣ್ಣೊಳೂ ಹೊಳೆದುದುಂಟು ಹೊನ್ನು; ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು !
ಆಶೆಯೆಂಬ ತಳವೊಡೆದ ದೋಣಿಯಲಿ ದೂರತೀರಯಾನ; ಯಾರ ಲೀಲೆಗೋ ಯಾರೋ ಏನೋ ಗುರಿ ಯಿರದೆ ಬಿಟ್ಟ ಬಾಣ ! ಇದು ಬಾಳು ನೋಡು; ಇದ ತಿಳಿದನೆಂದರೂ ತಿಳಿದ ಧೀರನಿಲ್ಲ; ಹಲವುತನದ ಮೈಮರೆಸುವಾಟವಿದು; ನಿಜವು ತೋರದಲ್ಲ !
0 Comments