ನಮ್ಮವರು ನಮಗಿಲ್ಲ ನಮಗೆ
ನಾವೆ ಎಲ್ಲ ಕಟ್ಟ ಕಡೆಗೆ
ನಂಬಿದವರೇ ನಮಗೆ ಕಾರುವರು
ವಿಷದ ಹೊಗೆ ಆಂತರ್ಯದೊಳಗೆ
ಹೂವೆಂದು ಅಪ್ಪಿದೆನು ಹಾವಾಗಿ
ಬುಸುಗುಟ್ಟಿ ಹೆಡೆಯೆತಿತ್ತು
ಒಲವೆಂದು ನಂಬಿದೆನು ಹಗೆತನದ
ಹೊಗೆ ಎದ್ದು ಪ್ರಜ್ವಲಿಸಿತು
ಹೊಳೆಯಲ್ಲಿ ಮುಳು ಮುಳುಗಿ ಸಾಯುತಿರೆ
ದಡದಲಿ ನಿಂತು ನಕ್ಕವರು
ಈಜಿ ದಡ ಕೈ ತರಲು ನಮ್ಮವನು
ನೀನೆಂದು ಬೆನ್ನ ತಟ್ಟುವರು
ಇದು ಲೋಕ ಇದು ಬಾಳು
ಇಂತಿರುವುದು ಒಂದು ದೈವದಾಟ
ಇದು ಪೂರ್ಣವೇನಲ್ಲ
ತಿಳಿದವಗೆ ಜಗವೆಲ್ಲ ರಸದ ಊಟ
-ಜಿ. ಎಸ್. ಶಿವರುದ್ರಪ್ಪ
0 Comments