ಜೀವ ಜಾತ್ರೆಯಲಿ ಪ್ರಾಣ ಪಾತ್ರೆಯಲಿ ತುಂಬಿ ಬಾ
ಓ ರಸ ತುಂಬಿ ಬಾ ಮೈ ತುಂಬಿ ಬಾ
ಇಂದು ಮಡಿಯುಟ್ಟು ಬಾ ಇಂದು ಕೈ ಮುಗಿದು ಬಾ
ಹೃದಯ ಪ್ರಣತಿಯಲಿ ಭಕ್ತಿ ತೈಲವನು ತುಂಬಿ ಬಾ
ಮಂಗಳದಾರತಿ ಬೆಳಗಿ
ಮಂತ್ರಗೋಷಗಳ ಮೊಳಗಿ
ದೇವರಥವ ಮುಂದೆಳೆಯೆ ಬಾ
ಬಾಳ ಬಾನಿನಲಿ ಚಂದ್ರ ಯಾನದಲಿ ತೇಲಿ ಬಾ
ಹೊಳೆ ಹೊಳೆದು ಬಾ
ಬೆಳ ಬೆಳಗಿ ಬಾ
ದುಗುಡ ಮೋಡಗಳ ತೂರಿ ಬಾ
ಮುಗಿಲ ಸಾಗರವ ಈಜಿ ಬಾ
ಇಳೆಯ ನಾಡಿಯಲಿ ಶಾಂತಿ ಕ್ರಾಂತಿಯನು ತುಂಬಿ ಬಾ
ಮನೆ ಮನಗಳ ಬೆಳಗಿ
ಅನಂದದ ತುಳುಕಿ
ರಜತ ರಜನಿಯಲಿ ರಾಜನಾಗಿ ಬಾ
ಹಿರಿಯರೂರಿನಲ್ಲಿ ಕಿರಿಯರೂರಿನಲ್ಲಿ ಬೆರೆದು ಬಾ
ತಿಳಿ ತಿಳಿದು ಬಾ ತಿಳಿಯಾಗಿ ಬಾ
ಸುಗುಣ ಗಣಗಳನು ತುಂಬಿ ಬಾ
ಸತ್ಗುರು ಅಪ್ಪನ ನಂಬಿ ಬಾ
ಇನೆಯ಼ ಸೇವೆಯಲಿ ಬೋಧ ಸಾರವನು ಹೀರಿ ಬಾ
ಹತ್ತು ಜನರ ಕಣ್ಗಿಳಿಸಿ
ಅವರೆದೆ ತಂತಿಯ ನುಡಿಸಿ
ವಿಶ್ವ ಗಾನವನು ಹಾಡು ಬಾ
-ಜಿ. ಎಸ್. ಶಿವರುದ್ರಪ್ಪ
0 Comments