Input license here

ಇತ್ತೀಚಿನ ಪೋಸ್ಟ್‌ಗಳು

ಬೆಳಗು ಬಾ ಹಣತೆಯನು

 ಬೆಳಗು ಬಾ ಹಣತೆಯನು
ನನ್ನೆದೆಯ ಗುಡಿಯಲ್ಲಿ
ದಿವ್ಯ ದೀಪಾವಳಿಯ
ಶುಭ ಘಳಿಗೆಯಲ್ಲಿ
ಬೆಳಗು ಬಾ ಓ ಗೆಳತಿ
ನಿನ್ನ ಒಲವಿನ ಪ್ರಣತಿ
ಶತಮಾನಗಳ ತಿಮಿರ
ಮುಸುಕಿದಿ ಮಂದಿರದ ಎದೆಯಾಳದಲ್ಲಿ

ಬೆಳಗು ಬಾ ದೀವಿಗೆಯ
ನನ್ನೆದೆಯ ಗುಡಿಯಲ್ಲಿ
ದಿವ್ಯ ದೀಪಾವಳಿಯ
ಶುಭ ಲಗ್ನದಲ್ಲಿ
ಎದೆಯ ಕಸವನು ಗುಡಿಸಿ
ರಂಗವಲ್ಲಿಯನ್ನಿರಿಸಿ
ಸಿಂಗರಿಸು ನನ್ನೆದೆಯ
ನಿನ್ನ ಪ್ರೇಮದ
ಸಂಪುಟ ಸಂಪತ್ತಿನಲಿ

ಬೆಳಗು ಬಾ ಜೋತಿಯನು
ಎದೆಯ ಮಂದಿರದಲ್ಲಿ
ಜಗಕೆ ಬೆಳಕಾಗುವೀ
ಶುಭ ಘಳಿಗೆಯಲ್ಲಿ
ಇನಿತು ದಿನ ಜಡ ನಾನು
ಬಂದ ಚೇತನ ನೀನು
ನಿನ್ನ ಶಕ್ತಿಯ ಬಲದಿ
ವ್ಯಕ್ತಿಯಾದೆನು ನಾನು
ಈ ಲೋಕದಲ್ಲಿ

-ಜಿ. ಎಸ್. ಶಿವರುದ್ರಪ್ಪ

Post a Comment

0 Comments