Input license here

ಇತ್ತೀಚಿನ ಪೋಸ್ಟ್‌ಗಳು

ತಿಂಗಾಳು ಮುಳುಗಿದವೊ

 

ತಿಂಗಾಳು ಮುಳುಗಿದವೋ
ರಂಗೋಲಿ ಬೆಳಗಿದವೋ
ತಾಯಿ ಚಾಮುಂಡಿಯ ಪೂಜೆಗೆಂದು
ಬಾಳೆ ಬಾಗಿದವೋ ||

ಮಾಯ್ಕಾತಿಚಾಮುಂಡೀ
ಮಂಡೆಲ್ಲಿ ಒದರೀರಿ
ಮೈಸೂರಿಮದಾಂಚೆ ಬೆಟ್ಟದಲ್ಲಿ
ಬಾಳೆ ಬಾಗಿದವೋ |
ಮೈಸೂರಿಂದಾಚೇ ಚಾಮುಂಡಿಬೆಟ್ಟದಲಿ
ಹೂ ಕಂಡು ಮಂಡೆ ಅಲ್ಲೆ ಒದರಿದರು
ಬಾಳೆ ಬಾಗಿದವೋ ||

ಕರಿಯ ಕಡ್ಡಯ ಸೀರೆ
ನರಿಗೆ ಚಿನ್ನದ ಕುಣಿಕೆ
ನಡೆಮುಡಿಯ ಮೇಲೆ ಬರುವವಳೆ
ಬಾಳೆ ಬಾಗಿದವೋ |
ನಡೆಮುಡಿಯ ಮೇಲೇ ಬರುವವಳೆ ಚಾಮುಂಡಿ
ದೊರೆಯೆದ್ದು ಕೈಯ ಮುಗಿದಾರೊ
ಬಾಳೆ ಬಾಗಿದವೋ ||

ಕನ್ನ ಕನ್ನಡಿ ಬಂದೊ
ಕಂಚಿನ ಹೆಬ್ಬರೆ ಬಂದೊ
ಸಣ್ಣೇರಿಮ್ಯಾಲೆ ಮಡೆ ಬಂದೊ
ಬಾಳೆ ಬಾಗಿದವೋ |
ಸಣ್ಣೇರಿ ಮ್ಯಾಲೆ ಮಡೆ ಬಂದೊ ಚಾಮುಂಡಿ
ನಿಮ್ಮೆಡೆಗೆ ತೋಡಲು ಬೆಳಗಾದೊ
ಬಾಳೆ ಬಾಗಿದವೋ ||


Post a Comment

0 Comments