ಬಾಗಿ ಬಾಗಿ ಬಂಗಾರ ತೂಗಿ
ಬೆಳ್ಳಿ ಮೂಡಿ ಬೆಳಗಾದವಮ್ಮ
ಗೋಕುಲ ಹೊಳಗೆ ಸಂಭ್ರಮವೆನ್ನಿರೆ
ನಂದಾನ ಕಂದ ಗೋವಿಂದ ||ಬಾ||
ನಂದಾನ ಕಂದಾ ಗೋವಿಂದ ಕೃಷ್ಣನ
ಚಂದಾದಿ ತೊಟ್ಟಿಲೊಳಗಿಟ್ಟು
ಚಂದಾದಿ ತೊಟ್ಟಿಲೊಳಗಿಟ್ಟು ಗೋಪ್ಯಮ್ಮ
ನಂದಾದಿ ತೂಗುತ್ತ ಪಾಡಿದಳೆ ||ಬಾ||
ಗೋವ್ಗಳ ಕಾಯ್ದಾನೆ ಬೆಣ್ಣೆಯ ಮೆದ್ದಾನೆ
ಬೆಟ್ಟಲ್ಲಿ ಬೆಟ್ಟಾವನೆತ್ತಿದಾನೆ
ಬೆಟ್ಟಲ್ಲಿ ಬೆಟ್ಟಾವನೆತ್ತಿದ ಶ್ರೀ ಕೃಷ್ಣ
ಗೋಪ್ಯಾರ ಸೀರೆ ಕದ್ದೊಯ್ದಾನೆ ||ಬಾ||
0 Comments