ಬಾಯಿ ನಾರಿದ ಮೇಲೆ ಏಕಾಂತವೇ
ತಾಯಿ ತೀರಿದ ಮೇಲೆ ತೌರಾಸೆಯೆ ಮನವೆ
ಕಣ್ಣು ಕೆಟ್ಟ ಮೇಲೆ ಕಡು ರೂಪ ಚೆಲ್ವಿಕೆಯೆ
ಬಣ್ಣಗುಂದಿದ ಮೇಲೆ ಬಹುಮಾನವೆ
ಪುಣ್ಯ ತೀರದ ಮೇಲೆ ಪರಲೋಕ ಸಾಧನವೆ
ಸುಣ್ಣವಿಲ್ಲದ ವೀಳ್ಯ ಅತಿಸಾರಕರವೇ
ಪಥ್ಯ ಸೇರದ ಮೇಲೆ ನಿತ್ಯ ಸುಖವೆನಬಹುದೆ
ಸತ್ವ ತಗ್ಗಿದ ಮೇಲೆ ಸಾಮರ್ಥ್ಯವೇ
ಪೃಥ್ವಿಯೊಳು ಕಾಗಿನೆಲೆ ಆದಿ ಕೇಶವ ನಿನ್ನ
ಭಕ್ತಿಯಿಲ್ಲದವಗೆ ಮುಕ್ತಿಯು ಉಂಟೆ

0 Comments