ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ರಂಗಯ್ಯ|
ಬಾರೋ ನಿನ ಮುಖ ತೋರೋ ನಿನ ಸರಿಯಾರೋ ಜಗದರಶೀಲನೆ ||೧||
ಅಂದುಗೆ ಪಾಡಗವು ಕಾಲಂದುಗೆ ಕಿರುಗೆಜ್ಜೆ ಧಿಂಧಿಮಿ ಧಿಮಿ ಧಿಮಿ ಧಿಮಿರೆನುತ |
ಪೊಂಗೊಳಲನೂದುತ ಬಾರಯ್ಯ ||೨||
ಕಂಕಣ ಕರದಲ್ಲಿ ಹೊನ್ನುಂಗುರ ಹೊಳೆಯುತ ಕಿಂಕಿಣಿ ಕಿಣಿ ಕಿಣಿ ಕಿಣಿರೆನುತಾ |
ಪೊಂಗೊಳಲನೂದುತ ಬಾರಯ್ಯ ||೩||
ದಾಸಾ ಉಡುಪಿಯಲಿ ನೆಲೆಯಾದಿಕೇಶವನೆ ದಾಸಾ ನಿನ ಪದ ದಾಸಾ ||೪||

0 Comments