ನನ್ನ ಇನಿಯನ ನೆಲೆಯ ಬಲ್ಲೆ ಏನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ ||೨||
ಇರುವೆ ಹರಿಯುವ ಸದ್ದು
ಮೊಗ್ಗು ತೆರೆಯುವ ಸದ್ದು
ಮಂಜು ಸುರಿಯುವ ಸದ್ದು ||೨||
ಕೇಳುವವನು ನನ್ನ ಮೊರೆಯನೇಕೆ ಕೇಳನವನು
ಗಿರಿಯ ಎತ್ತಲು ಬಲ್ಲ
ಶರದಿ ಬತ್ತಿಸ ಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲ್ಲಿಸಬಲ್ಲ ||೨||
ನನ್ನ ಸೆರೆಯನೇಕೆ ಬಿಡಿಸಲೊಲ್ಲ
ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮಳೆಬಿತ್ತು ತೆನೆಯೆತ್ತು ತೂಗುವವನ ||೨||
ನಲ್ಲೆಯ ಅಳಲನೇಕೆ ಅರಿಯನವನು
-ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ
0 Comments